ವಿದ್ಯಾರ್ಥಿನಿ ಅಶ್ಲೀಲ ಫೋಟೋ ಸ್ಟೇಟಸ್ ಗೆ ಹರಿಬಿಟ್ಟ ಶಿಕ್ಷಕ – ಗ್ರಾಮಸ್ಥರಿಂದ ಧರ್ಮದೇಟು..
ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳ ಜೊತೆ ತೆಗೆಸಿಕೊಂಡ ಅಶ್ಲೀಲ ಪೋಟೋಗಳನ್ನ ಸ್ಟೇಟಸ್ ಗೆ ಹಾಕಿದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕನ ಮೇಲೆ ಗ್ರಾಮಸ್ಥರು ದಾಳಿ ನಡೆಸಿದ್ದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಗ್ರಾಮವೊಂದರ ಪ್ರೌಢ ಶಾಲಾ ಶಿಕ್ಷಕ ಮಹೇಶ್ ಬಿರಾದಾರ (44) ವಿರುದ್ಧ ವಿದ್ಯಾರ್ಥಿನಿ ಪೋಷಕರು ಪೋಕ್ಸೋ ಕಾಯ್ದೆ ಅಡಿ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೈಸ್ಕೂಲು ಓದುತ್ತಿದ್ದ ಸಮಯದಲ್ಲಿ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ರೊಮ್ಯಾನ್ಸ್ ಮಾಡಿರುವ ಶಿಕ್ಷಕ, ಮೊಬೈಲ್ ನಲ್ಲಿ ಫೋಟೋ ತೆಗೆದುಕೊಂಡಿದ್ದಾನೆ. ಬಾಲಕಿ ಕಾಲೇಜು ಸೇರಿ, ಮನೆಯಲ್ಲಿ ಮದುವೆ ಗೊತ್ತು ಮಾಡುವ ವೇಳೆ, ವಿದ್ಯಾರ್ಥಿನಿ ಜೊತೆಗೆ ಶಿಕ್ಷಕನ ಲವ್ವಿಡವ್ವಿಯ ಅಶ್ಲೀಲ ಫೋಟೋಗಳನ್ನ ಮೊಬೈಲ್ ಸ್ಟೇಟಸ್ ನಲ್ಲಿ ಹರಿಬಿಟ್ಟಿದ್ದಾನೆ, ಇದರಿಂದ ಕೆರಳಿದ ಗ್ರಾಮಸ್ಥರು ಶಾಲೆಗೆ ಆಗಮಿಸಿದ ಶಿಕ್ಷಕನಿಗೆ ಧರ್ಮದೇಟು ಕೊಟ್ಟಿರುವ ಘಟನೆ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಬೈರವಾಡ ಗ್ರಾಮದ ಆರೋಪಿ ದೈಹಿಕ ಶಿಕ್ಷಕರಾಗಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ವಿದ್ಯಾರ್ಥಿನಿಗೆ ಸದ್ಯ ಬೇರೆ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು. ಆದ್ದರಿಂದ ಯುವತಿಯ ಮದುವೆ ನಿಲ್ಲಿಸಲು ತಮ್ಮ ಬಳಿ ಇದ್ದ ಖಾಸಗಿ ಫೋಟೋಗಳನ್ನು ಶಿಕ್ಷಕ ತನ್ನ ಮೊಬೈಲ್ ಸ್ಟೇಟಸ್ನಲ್ಲಿ ಇಟ್ಟುಕೊಂಡಿದ್ದ. ಆ ಬಳಿಕ ಫೋಟೋಗಳು ವೈರಲ್ ಆಗಿದ್ದವು.
ಇದನ್ನ ಗಮನಿಸಿದ ಗ್ರಾಮಸ್ಥರು ಮತ್ತು ಪೋಷಕರು ಶಾಲೆಗೆ ಆಗಮಿಸಿದ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಶಿಕ್ಷಕನ ವಿರುದ್ಧ ದೂರು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಶಿಕ್ಷಕನ ವಿರುದ್ಧ ಫೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.