ರಾಜ್ಯದಲ್ಲಿ ಇಂದು ಸಹ ಕೊರೊನಾ ಹಾವಳಿ ಮುಂದುವರೆದಿದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಕೊರೊನಾ ಪಾಸಿಟಿವ್ ಕೇಸ್ ಗಳ ಸಂಖ್ಯೆಯಲ್ಲಿ ಕಡಿಮೆಯಾಗಿದ್ರೂ, ಇದು ಸಮಾಧಾನಕರ ಸಂಗತಿಯೇನಲ್ಲ. ಯಾಕೆಂದ್ರೆ ಇಂದು ರಾಜ್ಯದಲ್ಲಿ ಹೊಸದಾಗಿ 5,483 ಜನರಲ್ಲಿ ಸೋಂಕಿರುವುದು ದೃಢವಾಗಿದ್ದು, ಇಂದು ಒಂದೇ ದಿನ 84 ಜನರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಂಟ್ಟು ಸೋಂಕಿತರ ಸಂಖ್ಯೆ 1,24,115ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 2314 ಕ್ಕೆ ಬಂದು ನಿಂತಿದೆ. ಇನ್ನೂ ಈವರೆಗೂ ರಾಜ್ಯದಲ್ಲಿ 49, 788 ಜನರು ಕಿಲ್ಲರ್ ಕೊರೊನಾದಿಮದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಒಟ್ಟು 72,005 ಕೇಸ್ ಗಳು ಈವರೆಗೂ ಸಕ್ರಿಯವಾಗಿವೆ. ಇನ್ನೂ ಬೆಂಗಳೂರಿನಲ್ಲಿಯೂ ರಣಕೇಕೆ ಹಾಕಿರುವ ಕೊರೊನಾ ಮಹಾಮಾರಿ 2220 ಜನರನ್ನ ಆವರಿಸಿದೆ. ಇನ್ನುಳಿದಂತೆ ಬೆಳಗಾವಿಯಲ್ಲಿ 217, ಬಳ್ಳಾರಿ 340, ಉಡುಪಿ 213 ಸೇರಿದಂತೆ ರಾಜ್ಯದ ಇತರೇ ಭಾಗಗಳಲ್ಲಿ ಒಟ್ಟು 5,483 ಹೊಸ ಕೇಸ್ ಗಳು ಪತ್ತೆಯಾಗಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ.
Transgender salon : ಮುಂಬೈನಲ್ಲಿ ಮಂಗಳಮುಖಿಯರ ಮೊದಲ ಸಲೂನ್ ಪ್ರಾರಂಭ…
Transgender salon : ಮುಂಬೈನಲ್ಲಿ ಮಂಗಳಮುಖಿಯರ ಮೊದಲ ಸಲೂನ್ ಪ್ರಾರಂಭ… ಮಂಗಳಮುಖಿಯರು ಅಥವಾ ತೃತಿಯಲಿಂಗಿ ಸಮುದಾಯದ ಜನರು ಇಂದಿಗೂ ಸಾಕಷ್ಟು ತಾರತಮ್ಯವನ್ನ ಸಮಾಜದಲ್ಲಿ ಎದುರಿಸುತ್ತಿದ್ದಾರೆ.ತಮ್ಮ ಅಸ್ತಿತ್ವ ಮತ್ತು...