ಅಂಚೆ ಇಲಾಖೆಯ ಹೊಸ ಯೋಜನೆ – ಕಡಿಮೆ ವೆಚ್ಚದಲ್ಲಿ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯಿರಿ
ಅಂಚೆ ಇಲಾಖೆಯ ಹೂಡಿಕೆ ಯೋಜನೆಯು ಸಂಪೂರ್ಣ ಸುರಕ್ಷಿತ ಹೂಡಿಕೆಯ ಯೋಜನೆಯಾಗಿದೆ.ಪೋಸ್ಟ್ ಆಫೀಸ್ ಸ್ಕೀಮ್‌ಗಳಲ್ಲಿ ಉತ್ತಮ ಹೂಡಿಕೆಯನ್ನು ಪಡೆಯುವ ಜೊತೆಗೆ ಲಾಭ ಪಡೆಯಬಹುದು. ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆ ಉತ್ತಮವಾಗಿದ್ದು
ಕಡಿಮೆ ವೆಚ್ಚದಲ್ಲಿ ಹೂಡಿಕೆ ಮಾಡುವ ಮೂಲಕ ಹಣವನ್ನು ಗಳಿಸಬಹುದು. ಅಂತಹ ಒಂದು ಪೋಸ್ಟ್ ಆಫೀಸ್ ಯೋಜನೆಯ ಹೆಸರು – ಪೋಸ್ಟ್ ಆಫೀಸ್ ಆರ್ಡಿ ಯೋಜನೆ.
ಪೋಸ್ಟ್ ಆಫೀಸ್ ಆರ್ಡಿ ಯೋಜನೆ ಎಂದರೇನು?

ಈ ಯೋಜನೆಯ ಮೂಲಕ, ಬಹಳ ಕಡಿಮೆ ಹಣದಿಂದ ಹೂಡಿಕೆ ಆರಂಭಿಸಬಹುದು. ಇದರ ಹೊರತಾಗಿ, ನಿಮ್ಮ ಹಣ ಕೂಡ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಇದರಲ್ಲಿ, ನೀವು ತಿಂಗಳಿಗೆ ರೂ 100 ರಿಂದ ಹೂಡಿಕೆ ಮಾಡಬಹುದು. ನೀವು ಎಷ್ಟು ಹೂಡಿಕೆ ಮಾಡಬಹುದು ಎಂಬುದಕ್ಕೆ ಗರಿಷ್ಠ ಮಿತಿ ಇಲ್ಲ. ಪೋಸ್ಟ್ ಆಫೀಸ್ ಆರ್ಡಿ ಠೇವಣಿ ಖಾತೆಯು ಸಣ್ಣ ಕಂತುಗಳನ್ನು ಉತ್ತಮ ಬಡ್ಡಿ ದರದಲ್ಲಿ ಜಮಾ ಮಾಡುವ ಸರ್ಕಾರದ ಖಾತರಿಯ ಯೋಜನೆಯಾಗಿದೆ.
ಅಂಚೆ ಕಚೇರಿಯಲ್ಲಿ ತೆರೆಯಲಾದ RD ಖಾತೆಯು 5 ವರ್ಷಗಳವರೆಗೆ ಇರುತ್ತದೆ. ಪ್ರತಿ ತ್ರೈಮಾಸಿಕದಲ್ಲಿ (ವಾರ್ಷಿಕ ದರದಲ್ಲಿ) ಠೇವಣಿ ಮಾಡಿದ ಹಣಕ್ಕೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ನಂತರ ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಸಂಯುಕ್ತ ಬಡ್ಡಿಯೊಂದಿಗೆ ನಿಮ್ಮ ಖಾತೆಗೆ ಸೇರಿಸಲಾಗುತ್ತದೆ. ಇಂಡಿಯಾ ಪೋಸ್ಟ್ ಆಫೀಸ್ ವೆಬ್‌ಸೈಟ್ ಪ್ರಕಾರ, ಪ್ರಸ್ತುತ ಆರ್‌ಡಿ ಸ್ಕೀಮ್‌ಗೆ 5.8 ಶೇಕಡಾ ಬಡ್ಡಿಯನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ತನ್ನ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿ ದರವನ್ನು ಘೋಷಿಸುತ್ತದೆ.
ನೀವು 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, 16 ಲಕ್ಷಕ್ಕಿಂತ ಹೆಚ್ಚಿನದನ್ನು ಪಡೆಯಬಹುದು.
ನೀವು ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಲ್ಲಿ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು 10 ವರ್ಷಗಳ ವರೆಗೆ ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯಲ್ಲಿ 16,26,476 ಲಕ್ಷಗಳನ್ನು ಪಡೆಯುತ್ತಾನೆ.
RD ಖಾತೆಯ ಬಗ್ಗೆ ಕೆಲವು ವಿಶೇಷ ಸಂಗತಿಗಳು
ನೀವು ಸಮಯಕ್ಕೆ ಸರಿಯಾಗಿ ಆರ್‌ಡಿ ಕಂತನ್ನು ಜಮಾ ಮಾಡದಿದ್ದರೆ, ದಂಡವನ್ನು ಪಾವತಿಸಬೇಕಾಗುತ್ತದೆ. ಕಂತು ವಿಳಂಬಕ್ಕಾಗಿ, ನೀವು ಪ್ರತಿ ತಿಂಗಳು ಒಂದು ಶೇಕಡಾ ದಂಡವನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ, ನೀವು ಸತತ 4 ಕಂತುಗಳನ್ನು ಜಮಾ ಮಾಡದಿದ್ದರೆ, ನಿಮ್ಮ ಖಾತೆಯನ್ನು ಮುಚ್ಚಲಾಗುತ್ತದೆ. ಆದಾಗ್ಯೂ, ಖಾತೆಯನ್ನು ಮುಚ್ಚಿದಾಗ, ಮುಂದಿನ 2 ತಿಂಗಳುಗಳವರೆಗೆ ಅದನ್ನು ಪುನಃ ಸಕ್ರಿಯಗೊಳಿಸಬಹುದು.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1440149327762968580?s=19
https://twitter.com/SaakshaTv/status/1440112164430389249?s=19
https://twitter.com/SaakshaTv/status/1440496744597360646?s=19
ವೆಜಿಟೆಬಲ್ ದೋಸೆ https://t.co/JllsY8WS3y
— Saaksha TV (@SaakshaTv) September 22, 2021
#PostOffice #newScheme








