post pandemic | ಮದ್ಯ ಸೇವಿಸುವುದರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ
ನವದೆಹಲಿ : ಕಮ್ಯುನಿಟಿ ಅಗೇನ್ಸ್ಟ ಡ್ರಂಕನ್ ಡ್ರೈವಿಂಗ್ ಸರ್ಕಾರೇತರ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಕೊರೊನಾ ಸೋಂಕು ನಂತರ ಮದ್ಯಸೇವನೆ ಮಾಡುವುದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಮನೆಯಲ್ಲಿ ಹಾಗೂ ಪಾರ್ಟಿಗಳಲ್ಲಿ ಕುಡಿಯುವವರು ಹೆಚ್ಚಾಗಿದ್ದರೇ, ಪಬ್ ಗಳಿಗೆ ಹೋಗಿ ಕುಡಿಯಲು ಸಾಕಷ್ಟು ಮಹಿಳೆಯರು ಇಷ್ಟಪಡುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಈ ವರ್ಷ ಆಗಸ್ಟ್ ನಿಂದ ಅಕ್ಟೋಬರ್ ವರೆಗೆ 18 ರಿಂದ 68 ನೇ ವಯಸ್ಸಿನ 5000 ಮಹಿಳೆಯರ ಮೇಲೆ ಸಮೀಕ್ಷೆ ನಡೆಸಲಾಗಿದ್ದು, ದತ್ತಾಂಶವು ಮಹಿಳೆಯರಲ್ಲಿ ಮದ್ಯ ಸೇವನೆ ಹೆಚ್ಚಾಗಿರುವುದನ್ನು ಸೂಚಿಸಿದೆ.
ಶೇಕಡಾ 45.7 ರಷ್ಟು ಮಹಿಳೆಯರು ಒತ್ತಡದಿಂದ ಕುಡಿಯುತ್ತಿದ್ದರೇ ಶೇಕಡಾ 30.1 ರಷ್ಟು ಮಹಿಳೆಯರು ಬೇಸರ ಹಾಗೂ ಒಂಟಿನತದಿಂದ ಹಾಗೂ ಶೇಕಡಾ 34.4 ರಷ್ಟು ಮಹಿಳೆಯರು ಆಲ್ಕೋಹಾಲ್ ಲಭ್ಯವಾಗುತ್ತಿರುವುದಿಂದ ಮದ್ಯ ಸೇವಿಸುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.