ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ (Puneeth Rajkumar) ಅವರು ಇಹಲೋಕ ತ್ಯಜಿಸಿ ನಾಳೆಗೆ ಎರಡು ದಿನ ಕಳೆಯಲಿವೆ. ಹೀಗಾಗಿ ಸ್ಮರಣಿಸುವುದಕ್ಕಾಗಿ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.
ಬೆಳಗ್ಗೆಯಿಂದಲೇ ಅಭಿಮಾನಿಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನೇತ್ರದಾನ, ಅನ್ನದಾನ ಶಿಬಿರ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಟುಂಬವು ಡಾ.ರಾಜಕುಮಾರ್ ಸಮಾಧಿ ಮಾದರಿಯಂತೆ ನಿರ್ಮಾಣ ಮಾಡಿದೆ. ಬಿಳಿ ಮಾರ್ಬಲ್ಸ್ ಬಳಸಿಕೊಂಡು ಅಪ್ಪು ಸಮಾಧಿಯನ್ನು ನಿರ್ಮಾಣ ಮಾಡಲಾಗಿದೆ. ನಾಳೆ ಬೆಳಿಗ್ಗೆ 9ಕ್ಕೆ ಕುಟುಂಬ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದೆ. ಅಶ್ವಿನಿ (Ashwini) ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಡಾ.ರಾಜಕುಮಾರ್ ಸೇರಿದಂತೆ ಎಲ್ಲರೂ ಪೂಜೆಯಲ್ಲಿ ಬಾಗಿಯಾಗಲಿದ್ದಾರೆ.








