Prabhas Love kruthi : ಪ್ರಭಾಸ್ – ಕೃತಿ ಸನೋನ್ ನಡುವೆ ಲವ್ ಇದೆಯಾ?
ಭಾರತೀಯ ಸ್ಟಾರ್ ನಟ ಪ್ರಭಾಸ್ ಮತ್ತು ಕೃತಿ ಸನೋನ್ ಕುರಿತ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೃತಿ ಪ್ರಭಾಸ್ ಅವರನ್ನು ಲವ್ ಮಾಡ್ತಾರೆ ಅನ್ನೊ ವದಂತಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೀಗ ಭೇದಿ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಹೀರೋ ವರುಣ್ ಧವನ್ ಅವರಾಡಿದ ಮಾತು ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ.
ವರುಣ್ ಧವನ್ ಮತ್ತು ಕೃತಿ ಜೋಡಿಯ ಭೇದಿಯಾ ಸಿನಿಮಾ ಪ್ರಚಾರದಲ್ಲಿ ವರುಣ್ ಧವನ್ ತಮ್ಮ ಲಿಸ್ಟ್ ನಲ್ಲಿ ಕೃತಿ ಹೆಸರು ಬರೆದಿರಲಿಲ್ಲ. ಯಾಕೆ ಅಂತ ಕೇಳಿದಾಗ ಅವರು ಕೃತಿಯ ಹೆಸರು ಬೇರೆಯವರ ಹೃದಯದಲ್ಲಿದೆ. ಆತ ಮುಂಬಯಿನಲ್ಲಿ ಇಲ್ಲ. ದೀಪಿಕಾ ಜೊತೆ ಶೂಟಿಂಗ್ ನಲ್ಲಿ ಇದ್ದಾರೆ ಅಂತ ಹೇಳಿದ್ದರು. ಆತ ಬೇರೆ ಯಾರು ಅಲ್ಲ, ಪ್ರಭಾಸ್ ಎಂದು ಅಭಿಮಾನಿಗಳು ಹೇಳುತ್ತಿದ್ದು, ಆ ವಿಡಿಯೋವನ್ನು ವೈರಲ್ ಮಾಡ್ತಾ ಇದ್ದಾರೆ.
ಆದಿಪುರುಷ್ ಸಿನಿಮಾದ ವೇಳೆ ನಟಿ ಕೃತಿ ಮೇಲೆ ಪ್ರಭಾಸ್ಗೆ ಲೈಟ್ ಆಗಿ ಲವ್ ಆಗಿದೆ ಅನ್ನೋ ವದಂತಿಗಳು ಹರಿದಾಡಲು ಶುರುವಾಗಿತ್ತು.
Prabhas Love kruthi : Is there love between Prabhas and Kriti Sanon?