ಸಲ್ಲು ಬಳಿಕ ಗಾಡ್ ಫಾಡರ್ ಸೆಟ್ ಗೆ ಪ್ರಭುದೇವಾ…
ಕೊರಟಾಲ ಶಿವ ನಿರ್ದೇಶನದ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾ ಏಪ್ರಿಲ್ 29 ರಂದು ರಿಲೀಸ್ ಆಗಿದ್ದು, ಥಿಯೇಟರ್ ಅಂಗಳದಲ್ಲಿ ಮಿಶ್ರ ಪ್ರದರ್ಶನದೊಂದಿಗೆ ಪ್ರದರ್ಶನ ಕಾಣುತ್ತಿದೆ.
ಇದರ ನಡುವೆ ಚಿರಂಜೀವಿ ಅವರು ಭೋಳಾ ಶಂಖರ್, ಗಾಡ್ ಫಾಡರ್, ಮೆಗಾ 154 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇದೀಗ ಮೋಹನ್ ರಾಜಾ ನಿರ್ದೇಶನದ ಗಾಡ್ ಫಾದರ್ ಸಿನಿಮಾದಿಂದ ಕ್ರೇಜಿ ಅಪ್ ಡೇಟ್ ಒಂದು ಬಹಿರಂಗವಾಗಿದ್ದು, ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಸಲ್ಮಾನ್ ಖಾನ್ ಜೊತೆಗೂಡಿ ಡ್ಯಾನ್ಸ್ ಮಾಡಲಿದ್ದಾರಂತೆ.
ಈ ವಿಚಾರವನ್ನು ಸಂಗೀತ ನಿರ್ದೇಶಕ ಥಮನ್ ಸ್ಪಷ್ಟಪಡಿಸಿದ್ದು, ಈ ಹಾಡಿಗೆ ಪ್ರಭುದೇವಾ ಕೊರಿಯಾಗ್ರಾಫಿ ಮಾಡುತ್ತಿದ್ದಾರೆ.
ಪ್ರಭುದೇವ ಅವರು ಈಗಾಗಲೇ ಸಾಕಷ್ಟ ಬಾರಿ ಚಿರಂಜೀವಿಯವರ ಹಲವು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿರುವುದು ಗೊತ್ತೇ ಇದೆ.
ಈಗ ಚಿರಂಜೀವಿ-ಸಲ್ಮಾನ್ ಖಾನ್ ಒಟ್ಟಿಗೆ ಹೆಜ್ಜೆ ಹಾಕುತ್ತಿರುವುದು, ತಮನ್ ಸಂಗೀತ ಸಂಯೋಜನೆ, ಪ್ರಭುದೇವ ನೃತ್ಯ ಸಂಯೋಜನೆ ಮಾಡುತ್ತಿರುವ ಹಾಡು ಯಾವ ರೇಂಜ್ ನಲ್ಲಿರುತ್ತೋ ಎಂಬೋದು ಸದ್ಯದ ಕುತೂಹಲವಾಗಿದೆ.