Prahlad Joshi | ಮಹಿಳಾ ಸಮುದಾಯಕ್ಕೆ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು
ಹುಬ್ಬಳ್ಳಿ : ರಾಷ್ಟ್ರ ಧ್ವಜದ ಮಹತ್ವವನ್ನ ಉಕ್ರೇನ್ ಯುದ್ದದ ಸಂದರ್ಭದಲ್ಲಿ ಭಾರತದ ವಿದ್ಯಾರ್ಥಿಗಳು ಸಾರಿದ್ದಾರೆ.
ಇದುವರೆಗೆ ಯಾರು ಧ್ವಜ ಹಾರಿಸಿಲ್ಲ, ಇಂದಿನಿಂದ ತಮ್ಮ ಮನೆಗಳ ಮುಂದೆ ಹಾರಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಪ್ರಧಾನಿ ಮೋದಿಯವರು ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ಈಗಾಗಲೇ ಒಂದು ಕೋಟಿ ಧ್ವಜ ಮಾರಾಟವಾಗಿವೆ. ರಾಷ್ಟ್ರ ಧ್ವಜದ ಮಹತ್ವವನ್ನ ಉಕ್ರೇನ್ ಯುದ್ದದ ಸಂದರ್ಭದಲ್ಲಿ ಭಾರತದ ವಿದ್ಯಾರ್ಥಿಗಳು ಸಾರಿದ್ದಾರೆ.
ಇದುವರೆಗೆ ಯಾರು ಧ್ವಜ ಹಾರಿಸಿಲ್ಲ, ಇಂದಿನಿಂದ ತಮ್ಮ ಮನೆಗಳ ಮುಂದೆ ಹಾರಿಸಿ ಎಂದು ಕರೆಕೊಟ್ಟರು.

ಇದೇ ವೇಳೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಲಂಚ ಮಂಚ ಹೇಳಿಕೆಗೆ ತಿರುಗೇಟು ನೀಡಿದ ಪ್ರಹ್ಲಾದ್ ಜೋಶಿ, ಇದು ಅವರ ಕೀಳು ಅಭಿರುಚಿ ತೋರಿಸುತ್ತಿದೆ.
ಅವರು ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ. ಯಾವ ಮಹಿಳೆಯೂ ಈ ಹೇಳಿಕೆಯನ್ನ ಸಹಿಸುವುದಿಲ್ಲ.
ಮಹಿಳಾ ಸಮುದಾಯಕ್ಕೆ ಅವರು ಕ್ಷಮೆ ಕೇಳಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಭ್ರಷ್ಟಾಚಾರವಾಗಿದೆ.
ಮಲ್ಲಿಕಾರ್ಜುನ್ ಖರ್ಗೆ ಕೇಂದ್ರದ ಸಚಿವ ಇದ್ದಾಗ ಅನೇಕ ವಿಷಯಗಳಲ್ಲಿ ಭ್ರಷ್ಟಾಚಾರವಾಗಿದೆ.
ಅವರಿಗೆ ನಾಚಿಕೆ ಮಾನ ಮರ್ಯಾದೆ ಇದ್ದಿದ್ರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು ಎಂದು ಹೇಳಿದರು.