ಕೆಲಸ ಮಾಡೋಕೆ ನನಗೆ ಇನ್ನೂ ಸಮಯ ಬೇಕು : ಪ್ರತಾಪ್ ಸಿಂಹ
ಮೈಸೂರು : ಕೆಲಸ ಮಾಡೋಕೆ ನನಗೆ ಇನ್ನೂ ಸಮಯ ಬೇಕು. ಮೈಸೂರು ಕೊಡಗು ಜನರ ನಿರೀಕ್ಷೆಗಳನ್ನು ಈಡೇರಿಸುವ ಜವಬ್ದಾರಿ ಇದೆ. ಹೀಗಾಗಿ ಈ ಬಗ್ಗೆ ಇನ್ನು ಹೆಚ್ಚಿನದನ್ನು ಹೇಳಲ್ಲ ಎಂದು ಸಚಿವ ಸ್ಥಾನ ಸಿಗುವ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.
ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಈ ವೇಳೆ ಕರ್ನಾಟಕದಿಂದ ಮೈಸೂರು ಸಂಸದ ಪ್ರತಾಪ್ ಸಿಂಹಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ.
ಈ ಬಗ್ಗೆ ಮೈಸೂರಿನಲ್ಲಿ ಸ್ವತಃ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ನನಗಿಂತಲೂ ಹಿರಿಯರು, ಅನುಭವಿಗಳು ರಾಜ್ಯದಲ್ಲಿ ಸಂಸದರಾಗಿದ್ದಾರೆ.
ಅವರೆಲ್ಲರಿಗೂ ನಾನು ಶುಭಾಶಯ ತಿಳಿಸುತ್ತೇನೆ. ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿಕೊಂಡರು.
ಇನ್ನು ಮೈಸೂರು ಕೊಡಗಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸಕ್ಕೆ ತಕ್ಕಂತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಸಂಸದನಾಗಿ ಇದಕ್ಕಿಂತ ದೊಡ್ಡ ಹುದ್ದೆ ಬೇರೆ ಯಾವುದು ಇಲ್ಲ.
ಇದಕ್ಕಿಂತ ನಾನು ಬೇರೆನೂ ನಿರೀಕ್ಷೆ ಮಾಡಿಲ್ಲ. ಕೆಲಸ ಮಾಡೋಕೆ ನನಗೆ ಇನ್ನೂ ಸಮಯ ಬೇಕು. ಮೈಸೂರು ಕೊಡಗು ಜನರ ನಿರೀಕ್ಷೆಗಳನ್ನು ಈಡೇರಿಸುವ ಜವಬ್ದಾರಿ ಇದೆ. ಹೀಗಾಗಿ ಈ ಬಗ್ಗೆ ಇನ್ನು ಹೆಚ್ಚಿನದನ್ನು ಹೇಳಲ್ಲ ಎಂದರು.