pre wedding incident
ಮೈಸೂರು: ಮದುವೆ ಸಂಭ್ರಮದಲ್ಲಿದ್ದ ನವಜೋಡಿ ಹೊಸ ಬದುಕಿನ ಬಗ್ಗೆ ಕನಸು ಕಟ್ಟಿಕೊಂಡಿದ್ದರು. ಆದ್ರೆ ವಿಧಿಯಾಟದಿಂದ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಗಿದ್ದ ಜೋಡಿ ಮಸಣ ಸೇರಿದೆ. ಮದುವೆ ಮನೆಯಲ್ಲಿ ಸಂಭ್ರಮದ ಬದಲು ಸಾವಿನ ಕರಿಛಾಯೆ ಆವರಿಸಿಬಿಟ್ಟಿದೆ. ಅಂದ್ಹಾಗೆ ಇಂತದ್ದೊಂದು ದುರ್ಘಟನೆ ನಡೆದಿರೋದು ಮೈಸೂರಿನ ತಲಕಾಡಿನಲ್ಲಿ.
ಪ್ರೀವೆಡ್ಡಿಂಗ್ ಪೋಟೋ ಶೂಟ್ ಮಾಡಲು ಹೋಗಿ ತೆಪ್ಪ ಮುಳುಗಿ ನವಜೋಡಿ ಸಾವನಪ್ಪಿದ್ದಾರೆ. ಈ ಘಟನೆಯಿಂದಾಗಿ ಇಡೀ ಊರಿಗೆ ಊರೇ ಕಂಬನಿ ಮಿಡಿದಿದೆ. ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾಗಿದ್ದ ಚಂದ್ರು ಮತ್ತು ಶಶಿಕಲಾ ಮದುವೆ ನಿಶ್ಚಯವಾಗಿತ್ತು. ನವೆಂಬರ್ 22ರಂದು ಈ ಜೋಡಿ ಹಸೆಮಣೆ ಏರಬೇಕಾಗಿತ್ತು. ಆದರೆ ಚಂದ್ರು ಮತ್ತು ಶಶಿಕಲಾ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಮನೆಯವರಿಗೆ ಹೇಳದೇ ಮೈಸೂರಿನ ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಗೆ ಹೋಗಿದ್ದಾರೆ.
ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪವನ್ನು ತೆಗೆದುಕೊಂಡು ಮಧ್ಯಭಾಗದಲ್ಲಿ ಫೋಟೋಶೂಟ್ ಮಾಡಿಸಲು ತೆರೆಳಿದ್ದಾರೆ. ಈ ವೇಳೆ ತೆಪ್ಪ ಮುಳುಗಿ ಇಬ್ಬರೂ ಜಲಸಮಾಧಿಯಾಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರೊಂದಿಗೆ ಸೇರಿ ಕಾರ್ಯಾಚರಣೆ ಮಾಡಿ ಇಬ್ಬರ ಮೃತದೇಹಗಳನ್ನ ಹೊರಕ್ಕೆ ತೆಗೆಸಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ಸಾವಿನಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಹೆಣ್ಣು ಮಗಳಿಗೆ ಕೆಟ್ಟದಾಗಿ ಬೈದಿಲ್ಲ, ಬೈಯೋದೂ ಇಲ್ಲ : ಮುನಿರತ್ನ
pre wedding incident
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel