ಉದ್ಯಮಿ ವಿಜಯ್ ಮಲ್ಯ ಅವರ ಮಗನ ಮದುವೆಗೆ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ಸಿದ್ಧಾರ್ಥ್ ಮಲ್ಯ ತನ್ನ ಗೆಳತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮದುವೆ ಪ್ರಕ್ರಿಯೆಗಳು ಕೂಡ ಆರಂಭವಾಗಿವೆ ಎಂದು ತಿಳಿದು ಬಂದಿದೆ.
ಸಿದ್ಧಾರ್ಥ್ ಮಲ್ಯ ತನ್ನ ಗೆಳತಿ ಜಾಸ್ಮಿನ್ ರನ್ನು ವರಿಸಲು ಮುಂದಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಸಿದ್ದಾರ್ಥ್ ಮಲ್ಯ ಹಂಚಿಕೊಂಡಿದ್ದಾರೆ. ಅಲ್ಲದೇ, ಜಾಸ್ಮಿನ್ ಜೊತೆಗಿನ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಸಿದ್ದಾರ್ಥ್ ಮಲ್ಯಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಿದ್ಧಾರ್ಥ್ ಮಲ್ಯ ಇನ್‌ಸ್ಟಾಗ್ರಾಂ ಪೋಸ್ಟ್ ಮದುವೆಯ ವಾರ ಪ್ರಾರಂಭವಾಗಿದೆ ಎಂದು ಸಿದ್ಧಾರ್ಥ್ ಮಲ್ಯ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಹ್ಯಾಲೋವೆನ್ 2023 ರ ಸಂದರ್ಭದಲ್ಲಿ ಜಾಸ್ಮಿನ್‌ಗೆ ಮದುವೆಯ ಪ್ರಸ್ತಾಪ ಮಾಡಿದ್ದರು. ಈಗ ಮದುವೆಯಾಗಲು ಸಜ್ಜಾಗಿದ್ದಾರೆ. ಮಾಟಗಾತಿಯ ವೇಷಭೂಷಣ ತೊಟ್ಟಿದ್ದ ಜಾಸ್ಮಿನ್‌ಗೆ ಮಂಡಿಯೂರಿ ಕುಳಿತು ಪ್ರಪೋಸ್ ಮಾಡುತ್ತಿದ್ದ. ಎರಡನೇ ಫೋಟೋ ಜಾಸ್ಮಿನ್ ಅವರ ನಿಶ್ಚಿತಾರ್ಥದ ಉಂಗುರವನ್ನು ತೋರಿಸುವ ಸಂತೋಷದ ಕ್ಷಣಗಳನ್ನು ಇನ್ ಸ್ಟಾಗ್ರಾಂನಲ್ಲಿ ಸಿದ್ದಾರ್ಥ್ ಹಂಚಿಕೊಂಡಿದ್ದರು. ಸಿದ್ಧಾರ್ಥ್ ಮಲ್ಯ ನಟ ಮತ್ತು ಮಾಡೆಲ್. ಅವರ ತಂದೆ ವಿಜಯ್ ಮಲ್ಯ ಯುಬಿ ಗ್ರೂಪ್ ನ ಮಾಜಿ ಅಧ್ಯಕ್ಷರು.