ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಿಎಂ ತವರು ನೆಲದಲ್ಲಿ ನಿಂತು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಕುಡಿಯುವ ನೀರಿನ ವಿಷಯ ಪ್ರಸ್ತಾಪಿಸಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ತಾಯಿ ಚಾಮುಂಡೇಶ್ವರ ಆಶೀರ್ವಾದ ಪಡೆಯುವ ಸೌಭಾಗ್ಯ ಸಿಕ್ಕಿದೆ. ತಾಯಿ ಭುವನೇಶ್ವರಿ, ತಾಯಿ ಕಾವೇರಿಗೆ ನನ್ನ ಪ್ರಣಾಮ ಸಲ್ಲಿಸುತ್ತೇನೆ. ಹಿರಿಯ ನಾಯಕ ದೇವೇಗೌಡ ಅವರ ಆಶೀರ್ವಾದ ಸಿಕ್ಕಿದೆ. ಮೈಸೂರು, ಇಡೀ ಕರ್ನಾಟಕದ ಆಶೀರ್ವಾದ ನಮಗೆ ಸಿಗಬೇಕು ಎಂದು ಮನವಿ ಮಾಡಿದರು.
ದೇಶಕ್ಕೆ ಮೋದಿಯೇ ಗ್ಯಾರಂಟಿ. ಪ್ರತಿ ಬಡವನಿಗೂ ಮನೆ ನೀಡುತ್ತೇವೆ. 3 ಕೋಟಿ ಮಹಿಳೆಯರನ್ನು ನಾವು ಲಕ್ಷಾದೀಶೆಯನ್ನಾಗಿ ಮಾಡುತ್ತೇವೆ. ಡಿಜಿಟಲ್ ಇಂಡಿಯಾ ನಮ್ಮ ಜನರ ಬದುಕನ್ನು ಬದಲಾಯಿಸಿದೆ. ಇಂದಿನ ಭಾರತ ಬದಲಾಗಿದೆ. ಪೂರ್ಣ ಪ್ರಮಾಣದಲ್ಲಿ ಹೈವೆ ರಸ್ತೆಗಳು ನಿರ್ಮಾಣವಾಗಿವೆ. 10 ವರ್ಷಗಳ ಹಿಂದೆ ಭಾರತ ಬೇರೆ ದೇಶದ ಮೇಲೆ ಅವಲಂಬಿತವಾಗಿತ್ತು. ಟೆಕ್ನಾಲಜಿ ಕ್ಷೇತ್ರದಲ್ಲಿ ಇಂದು ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಭಾರತವನ್ನೇ ಈಗ ಹಲವು ರಾಷ್ಟ್ರಗಳು ಅವಲಂಬಿಸಿವೆ ಎಂದು ಹೇಳಿದ್ದಾರೆ.
ತ್ರಿವಳಿ ತಲಾಖ್, ಮಹಿಳೆಯರಿಗೆ ಮೀಸಲಾತಿ, ರಾಮಮಂದಿರ ನಿರ್ಮಾಣ. ಬಿಜೆಪಿಯ ಸಂಕಲ್ಪ ಅದು ಮೋದಿಯ ಗ್ಯಾರಂಟಿ ಆಗಿರುತ್ತದೆ. ನಿಮ್ಮ ಒಂದು ವೋಟು, ನನನ್ನ ಶಕ್ತಿ ಹೆಚ್ಚಿಸುತ್ತದೆ. ಕಾಂಗ್ರೆಸ್ ಪಕ್ಷ ತುಕಡೆ ತುಕಡೆ ಗ್ಯಾಂಗ್ ಜೊತೆ ಇದೆ. ಭಾರತ ಮಾತೆ ಜೈ ಹೇಳೋಕೆ ಯಾರ ಅನುಮತಿ ಪಡೆಯ ಬೇಕು ನೀವೆ ಹೇಳಿ ಎಂದು ಮಲ್ಲಿಕಾರ್ಜುನ ಖರ್ಗೆಗೆ ಟಾಂಗ್ ಕೊಟ್ಟಿದ್ದಾರೆ.