ಚಿಕ್ಕಬಳ್ಳಾಪುರ: ಬಿಜೆಪಿ-ಜೆಡಿಎಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅವರು ಕನ್ನಡದಲ್ಲಿಯೇ ತಮ್ಮ ಭಾಷಣ ಆರಂಭಿಸಿದರು. ಕೈವಾರ ತಾತಯ್ಯ (Kaiwara Tatayya) ಮತ್ತು ಸರ್ ಎಂ ವಿಶ್ವೇಶ್ವರಯ್ಯ (Sir M Visvesvaraya) ರಂತಹ ಮಹನೀಯರು ಜನಿಸಿದ ಪುಣ್ಯಭೂಮಿಯಲ್ಲಿ ನಿಮ್ಮ ದರ್ಶನ ಮಾಡುತ್ತಿರುವುದು ನನ್ನ ಸೌಭಾಗ್ಯ ಎಂದರು.
ಮೊದಲ ಹಂತದ ಮತದಾನ ದೇಶದ ಉತ್ಸಾಹವನ್ನು ಹೆಚ್ಚಿಸಿದೆ ಮತ್ತು ಜನ ವಿಕ್ಸಿತ್ ಭಾರತ್ ಮತ್ತು ಎನ್ ಡಿಎ ಪರ ಮತ ಚಲಾಯಿಸಿ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅಪರಿಮಿತ ಮತ್ತು ಬತ್ತದ ಉತ್ಸಾಹದ ಬಗ್ಗೆ ಮಾತಾಡಿದ ಪ್ರಧಾನಿ ಮೋದಿ 90ರ ಇಳಿಪ್ರಾಯದಲ್ಲಿ ಅವರಲ್ಲಿರುವ ಚೇತನ, ಹುರುಪು ಮತ್ತು ಲವಲವಿಕೆ ನನ್ನಂಥ ಯುವಕನಿಗೂ ಪ್ರೇರಣಾದಾಯಕವಾಗಿದೆ ಎಂದು ಹಾಡಿ ಹೊಗಳಿದ್ದಾರೆ.
ರಾಜ್ಯದ ಹಿತಾಸಕ್ತಿಯ ಬಗ್ಗೆ ದೇವೇಗೌಡರಿಗೆ ಇರುವ ಬದ್ಧತೆ ಮತ್ತು ಕರ್ನಾಟಕಕ್ಕೆ ಈಗ ಎದುರಾಗಿರುವ ದುರ್ದೆಶೆಯ ಬಗ್ಗೆ ಅವರಲ್ಲಿರುವ ನೋವನ್ನು ನಾನು ಭಾಷೆ ಗೊತ್ತಿಲ್ಲದಿದ್ದರೂ ಅರ್ಥ ಮಾಡಿಕೊಳ್ಳಬಲ್ಲೆ. ಕರ್ನಾಟಕದ ಭವಿಷ್ಯ ಉಜ್ವಲವಾಗಿದೆ ಎಂಬ ಭಾವನೆ ನನ್ನಲ್ಲಿ ಮೂಡುತ್ತಿದೆ. ಈ ಬಾರಿ ಎಲ್ಲರೂ ನಮ್ಮ ಮೈತ್ರಿಗೆ ಮತ ನೀಡಿ ಎಂದು ಮನವಿ ಮಾಡಿದರು.