ಸಾಮಾನ್ಯವಾಗಿ ಟಿವಿಯಲ್ಲಿ ಜನರು ಹೆಚ್ಚಾಗಿ ಸ್ಟಾರ್ ನಟರ ಕಾರ್ಯಕ್ರಮಗಳನ್ನ ವೀಕ್ಷಣೆ ಮಾಡುತ್ತಾರೆ ಅಂತ ನಾವೆಲ್ಲ ಅಂದುಕೊಳ್ತೇವೆ. ಆದರೆ ಸ್ಟಾರ್ ನಟರ ದಾಖಲೆಗಳನ್ನ ನುಚ್ಚು ನೂರು ಮಾಡಿ ಹೊಸ ದಾಖಲೆ ದೃಷ್ಟಿ ಮಾಡಿಸಿದ್ದಾರೆ ಪ್ರದಾನಿ ನರೇಂದ್ರ ಮೊದಿ. ಈ ಮೂಲಕ ಸ್ಟಾರ್ ನಟರಿಗಿಂತ ಹೆಚ್ಚು ಫಾಲೋವರ್ಸ್ ಇರೋದು ಪ್ರಧಾನಿ ನರೇಂದ್ರ ಮೋದಿ ವರಿಗೆ ಅನ್ನೋದು ಗೊತ್ತಾಗಿದೆ.
ಸ್ಟಾರ್ ನಟರ ದಾಖಲೆಗಳನ್ನೆಲ್ಲಾ ಪುಡಿ ಪುಡಿ ಮಾಡಿ ಹೊಸ ದಾಖಲೆ ಬರೆದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಬಾರ್ಕ್ ನೀಡಿರುವ ಅಂಕಿ-ಅಂಶದ ಪ್ರಕಾರ ಟಿವಿಯಲ್ಲಿ ಅತಿ ಹೆಚ್ಚು ನೋಡಿರುವ ಕಾರ್ಯಕ್ರಮ ಅಂದ್ರೆ ಅದು ಬೇರೆ ಯಾರೂ ಅಲ್ಲ ಪ್ರಧಾನಿ ನರೇಂದ್ರ ಮೋದಿಯವರದ್ದು.
ಅದರಲ್ಲೂ ಆಗಸ್ಟ್ 05 ರಂದು ಪ್ರಧಾನಿ ನರೇಂದ್ರ ಅವರು ಭಾಗವಹಿಸಿದ್ದ ಅಯೋಧ್ಯೆ ರಾಮಜನ್ಮ ಭೂಮಿ ಶಿಲಾನ್ಯಾಸ ಕಾರ್ಯಕ್ರಮವಂತು ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ಕಾರ್ಯಕ್ರಮವಾಗಿದೆ. ಬರೋಬ್ಬರಿ 16.30 ಕೋಟಿಗೂ ಅಧಿಕ ಜನರು ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದಾರೆ. 198 ವಹಿನಿಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಿತ್ತು ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
ಇದಾದ ಬಳಿಕ ಸ್ವಾತಂತ್ರ್ಯೋತ್ಸವದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಮತ್ತೊಂದು ದಾಕಲೆ ಸೃಷ್ಟಿಸಿದೆ. ಸ್ವಾತಂತ್ರ್ಯ ದಿನಾಚರಣೆ ದಿನದಂದು ಕೆಂಪುಕೋಟೆಯಿಂದ ನಮೋ ಮಾಡಿದ ಭಾಷಣ ಹೊಸ ದಾಖಲೆ ಬರೆದಿದೆ. ವಿಶೇಷವೆಂದರೆ ಈ ಹಿಂದಿನ ದಾಖಲೆಯೂ ಮೋದಿಯವರದ್ದೇ ಆಗಿತ್ತು. ಈ ಭಾಷಣ, ಅತಿ ಹೆಚ್ಚು ವೀವ್ಸ್ ಪಡೆದಿದ್ದು, ಹೆಚ್ಚು ವೀಕ್ಷನಾ ಅವಧಿ ಪಡೆದ ಕಾರ್ಯಕ್ರಮವಾಗಿದೆ. ಬರೋಬ್ಬರಿ 42 ಕೋಟಿ ನಿಮಿಷಗಳ ಕಾಲ ಈ ಕಾರ್ಯಕ್ರಮವನ್ನು ಜನರು ವೀಕ್ಷಿಸಿದ್ದಾರೆ.