ಗುವಾಹಟಿ: ಅಯೋಧ್ಯೆಯಲ್ಲಿ ಇಂದು ಸಂಭ್ರಮ ಮನೆ ಮಾಡಿದೆ. ರಾಮ ನವಮಿಯನ್ನು ಇಡೀ ಭಾರತೀಯರೇ ರಾಮನ ಜಪ ಮಾಡಿದ್ದಾರೆ. ಈ ಮಧ್ಯೆ ಚುನಾವಣೆಯ ಬ್ಯೂಸಿಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ರಾಮಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸುವ ಸೂರ್ಯ ರಶ್ಮಿಯನ್ನು ವೀಕ್ಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ನಲ್ಬರಿ ರ‍್ಯಾಲಿಯ ನಂತರ ನಾನು ಸೂರ್ಯ ತಿಲಕ ವೀಕ್ಷಿಸಿದ್ದೇನೆ. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣವಾಗಿದೆ. ಈ ಸೂರ್ಯ ತಿಲಕ ನಮ್ಮ ಜೀವನಕ್ಕೆ ಶಕ್ತಿ ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರಗಳನ್ನು ಏರಲು ಪ್ರೇರೇಪಿಸಲಿ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಅವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಇದರ ಮಧ್ಯೆಯೇ ಟ್ಯಾಬ್ಲೆಟ್ ನಲ್ಲಿ ಅವರು ಸೂರ್ಯ ರಶ್ಮಿ ಸ್ಪರ್ಶಿಸುವ ಕ್ಷಣವನ್ನು ವೀಕ್ಷಿಸಿ ಪುಳುಕಿತರಾಗಿದ್ದಾರೆ. ಇದನ್ನು ಕಂಡು ಭಾರತೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.