‘ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಚೀನಾದಿಂದ ಕೋಟ್ಯಂತರ ರೂ. ದೇಣಿಗೆ’

ನವದೆಹಲಿ : ಚೀನಾ ವಿಚಾರದಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ಕೆಸರೆರಚಾಟ ಮುಂದುವರಿದಿದೆ. ಮೊನ್ನೆಯಷ್ಟೆ ಬಿಜೆಪಿ ರಾಜೀವ್ ಗಾಂಧಿ ಫೌಂಡೇಶನ್ ಗೆ ಚೀನಾದಿಂದ ಹಣ ಪೂರೈಕೆಯಾಗಿದೆ ಎಂಬ ಆರೋಪ ಮಾಡಿತ್ತು. ಇದೀಗ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಚೀನಾದ ಸಂಸ್ಥೆಗಳು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣವನ್ನು ನೀಡುತ್ತಿವೆ. ಭಾರತ ಮತ್ತು ಚೀನಾದ ಸಂಬಂಧ ಗಡಿಯ ವಿಷಯದಲ್ಲಿ ಹಳಸಿರುವಾಗ ಕೇಂದ್ರ ಸರ್ಕಾರ ಇಂತಹ ಹಣವನ್ನು ಏಕೆ ಚೀನಾದಿಂದ ಪಡೆಯಬೇಕು ಎಂದು ಪ್ರಶ್ನಿಸಿದೆ.

ಬಿಜೆಪಿ ಆರೋಪದ ವಿಚಾರವಾಗಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಮಾತನಾಡುತ್ತಾ, ಕಳೆದ 6 ವರ್ಷಗಳಲ್ಲಿ ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ 18 ಸಭೆಗಳನ್ನು ನಡೆಸಿದ್ದಾರೆ. ಆದರೆ ಇದರಿಂದ ದೇಶಕ್ಕೆ ಏನು ಲಾಭವಾಗಿದೆ..? ನಿನ್ನೆ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಏಕೆ ಚೀನಾದ ಹೆಸರು ಹೇಳಿ ಅದನ್ನು ಆಕ್ರಮಣಕಾರಿ ಎಂದು ಪ್ರಸ್ತಾಪಿಸಲಿಲ್ಲ ಎಂದು ಪ್ರಶ್ನಿಸಿದರು.

ಚೀನಾ ಸರ್ಕಾರವನ್ನು ಆಕ್ರಮಣಕಾರಿ ಎಂದು ಪ್ರಧಾನಿ ಹೇಳಬೇಕು ಎಂದು ನಾನು ಈ ಸಂದರ್ಭದಲ್ಲಿ ಒತ್ತಾಯಿಸುತ್ತೇನೆ ಎಂದ ಸಿಂಘ್ವಿ, ದೇಶದ ಭದ್ರತೆ ವಿಚಾರದಲ್ಲಿ ಹೆಚ್ಚು ಆತಂಕಪಡುವ ಮತ್ತು ಎಚ್ಚರಿಕೆ ವಿಷಯ ಏನೆಂದರೆ ಚೀನಾದ ಕಂಪೆನಿಗಳಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ಪಡೆಯುತ್ತಿರುವುದು.  ಪ್ರಧಾನ ಮಂತ್ರಿಗಳು ಚೀನಾದ ಕಂಪೆನಿಗಳಿಂದ ಪರಿಹಾರ ನಿಧಿಗೆ ಲಕ್ಷಾಂತರ, ಕೋಟ್ಯಂತರ ಹಣ ಪಡೆಯುತ್ತಿದ್ದಾರೆ ಎಂದರೆ ಅವರು ಚೀನಾವನ್ನು ಆಕ್ರಮಣಕಾರಿ ಎಂದು ಕರೆದು ತನ್ನ ದೇಶವನ್ನು ರಕ್ಷಿಸಿಕೊಳ್ಳುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This