ಬೀದರ್: ಮಹಿಳೆಯೊಬ್ಬರು ಖಾಸಗಿ ವೈದ್ಯರ ಯಡವಟ್ಟಿನಿಂದಾಗಿ ಕಣ್ಣು ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ.
ಬೀದರ್ ಗುಂಪ್ಪಾದಲ್ಲಿರುವ ವಿಜಯ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ವಿರುದ್ಧವೇ ಈ ಆರೋಪ ಕೇಳಿ ಬಂದಿದೆ. ಸಿಂದಗಿ ತಾಲ್ಲೂಕಿನ ರಾಂಪುರ ಗ್ರಾಮದ ವಂದನಾ, ಕಣ್ಣು ಕಳೆದುಕೊಂಡ ಮಹಿಳೆ.
ಈ ಮಹಿಳೆ ಟೆಸ್ಟ್ ಟ್ಯೂಬ್ ಬೇಬಿಗಾಗಿ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ವೈದ್ಯರು ಹೈಡೋಸ್ ಇಂಜೆಕ್ಷನ್ ನೀಡಿದ್ದರಿಂದಾಗಿ ಈ ಮಹಿಳೆ ಕಣ್ಣು ಕಳೆದುಕೊಳ್ಳುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಮಹಿಳೆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.