ಖಾಸಗಿ ಶಾಲೆಗಳ ಶುಲ್ಕ ಶೇ.30ರಷ್ಟು ಕಡಿತ : ರಾಜ್ಯ ಸರ್ಕಾರದಿಂದ ಆದೇಶ..!
ಬೆಂಗಳೂರು : ರಾಜ್ಯ ಸರ್ಕಾರ ಕಡೆಗೂ ಪೋಷಕರ ಮನವಿಗೆ ಮಣಿದಿದೆ. ಕೊರೊನಾ ಸಂಕಷ್ಟದ ನಂತರ ಖಾಸಗಿ ಶಾಲೆಗಳಲ್ಲಿ ಶುಲ್ಕ ಕಡಿತಗೊಳಿಸುವಂತೆ ಪೋಷಕರು ಆಗ್ರಹಿಸುತ್ತಲೇ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದೀಗ ಪೋಷಕರಿಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಅದರಂತೆ ಖಾಸಗಿ ಶಾಲೆಗಲ್ಲಿ ಶೇ.30ರಷ್ಟು ಶುಲ್ಕ ಕಡಿತ ಮಾಡುವಂತೆ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗ್ತಿದೆ ಉಪ್ಮಾ : swiggy ವಿರುದ್ಧ ನೆಟ್ಟಿಗರು ಗರಂ..!
ಈ ಬಗ್ಗೆ ನಿನ್ನೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡಿದ್ದರು. ಈ ಬಗ್ಗೆ ರಾಜ್ಯ ಸರ್ಕಾರದಿಂದ ಇಲಾಖೆ ಅಧಿಯನ ಕಾರ್ಯದರ್ಶಿ ಶಿವಕುಮಾರ್ ಆದೇಶ ಹೊರಡಿಸಿರುವ ಹೊರಡಿಸಿದ್ದಾರೆ. ಇನ್ನು ಶಾಲಾ ಶುಲ್ಕ ಕಡಿತ ಆದೇಶ ಪಾಲನೆಗೆ ಜಿಲ್ಲೆಗಳಲ್ಲಿ ಸಮಿತಿಗಳನ್ನು ರಚಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ನಾನು ಮುಗ್ಧೆ..`ಬಲಿ ಪಶು ಆಗಿದ್ದೇನೆ’ : ರಾಗಿಣಿ
2020-21ನೇ ಸಾಲಿನಲ್ಲಿನ ಶಾಲಾ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಶೇ.30ರಷ್ಟು ವಿನಾಯಿತಿಯನ್ನುನೀಡಲಾಗಿದ್ದು, ಶಾಲಾ ಬೋಧನಾ ಶುಲ್ಕವನ್ನು ಹೊರತು ಪಡಿಸಿ ಶಾಲೆಗಳು ಬೇರೆ ಯಾವುದೇ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುವಂತಿಲ್ಲ. ಒಂದೊಮ್ಮೆ ಪೋಷಕರು ಪೂರ್ಣ ಶುಲ್ಕವನ್ನು ನೀಡಿದ್ದರೆ, ಅಂತವರ ಶುಲ್ಕವನ್ನು ಮುಂದಿನ ಸಾರಿಗೆ ಹೊಂದಾಣಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಪೋಷಕರಿಗೆ ಮೂರು ಕಂತುಗಳಲ್ಲಿ ಶುಲ್ಕವನ್ನು ಕಟ್ಟುವಂತೆ ಅವಕಾಶವನ್ನು ನೀಡಬೇಕು ಅಂತ ಹೇಳಿದೆ.
“ನನ್ನ ಆಕ್ರಂದನ ಕೇಳುತ್ತಿಲ್ಲವೇ…?” ನೋವಿನಿಂದ ಅಲವತ್ತುಕೊಳ್ಳುತ್ತಿದೆ ಚಿಕ್ಕಮಗಳೂರಿನ ಬಸವನಹಳ್ಳಿ/ದಂಟರಮಕ್ಕಿ ಕೆರೆ:
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel