ಸಂಕಷ್ಟದಲ್ಲಿ ಪ್ರಿಯಾಮಣಿ ದಾಂಪತ್ಯ : ಮುಸ್ತಫಾ ರಾಜ್ ಜೊತೆಗಿನ ಮದುವೆ ಅಸಿಂಧು ಎಂದ ಮೊದಲ ಪತ್ನಿ..!
ಸ್ಯಾಂಡಲ್ ವುಡ್ , ಟಾಲಿವುಡ್ , ಕಾಲಿವುಡ್ ಸೇರಿ ಬಹುಭಾಷೆಗಳಲ್ಲಿ ನಟಿಸಿ ತಮ್ಮ ಪ್ರತಿಭೆಯಿಂದ ಅನೇಕ ಅಭಿಮಾನಿಗಳನ್ನ ಗಳಿಸಿರುವ ಕನ್ನಡತಿ ಪ್ರಿಯಾಮಣಿ 2017 ರಲ್ಲಿ ಮುಸ್ತಫಾ ರಾಜ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇದೀಗ ಇವರ ವಿವಾಹ ಅಸಿಂಧು ಎಂದು ಮುಸ್ತಫಾ ರಾಜ್ ಮೊದಲ ಪತ್ನಿ ಗಂಭೀರವಾಗಿ ಆರೋಪಿಸಿದ್ದಾರೆ. ಹೌದು ಕಾನೂನಿನ ಪ್ರಕಾರ ಮುಸ್ತಫಾ ಜೊತೆಗಿನ ನನ್ನ ಮದುವೆ ಕೊನೆಗೊಂಡಿಲ್ಲ, ನಾನಿನ್ನು ಮುಸ್ತಫಾ ಅವರ ಮೊದಲ ಪತ್ನಿ ಎಂದು ಅಯೆಷಾ ಆರೋಪ ಮಾಡಿದ್ದಾರೆ. ಆದ್ರೆ ಮುಸ್ತಫಾ ಇದು ನನ್ನಿಂದ ಹಣ ಪೀಕುವ ಹುನ್ನಾರ ಅಷ್ಟೇ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರೋ ಮುಸ್ತಫಾ, ನನ್ನ ವಿರುದ್ಧದ ಆರೋಪಗಳು ಸುಳ್ಳು. ನಾನು ಮಕ್ಕಳಿಗಾಗಿ ಆಯೆಷಾಗೆ ಹಣವನ್ನು ನೀಡುತ್ತಿದ್ದೀನಿ. ನನ್ನಿಂದ ಹಣ ವಸೂಲಿ ಮಾಡಲು ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಕೌಟುಂಬಿಕ ಹಿಂಸಾಚಾರ ಸೇರಿದಂತೆ ನನ್ನ ವಿರುದ್ಧ ಆರೋಪ ಮಾಡಲು ಯಾಕಿಷ್ಟು ದಿನ ಕಾಯುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.
ಅಂದ್ಹಾಗೆ ಮುಸ್ತಫಾ ಮತ್ತು ಆಯೆಷಾ ಇಬ್ಬರು 2013ರಲ್ಲಿ ಬೇರೆ ಬೇರೆಯಾಗಿದ್ದರು. ಮುಸ್ತಫಾ ಮತ್ತು ಆಯೆಷಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬಳಿಕ ಮುಸ್ತಫಾ ನಟಿ ಪ್ರಿಯಾಮಣಿ ಅವರನ್ನು 2017ರಲ್ಲಿ ಮದುವೆಯಾದರು. ಆದ್ರೆ ಆವರಿಬ್ಬರು ಮದುವೆಯಾದ ಸುಮಾರು 4 ವರ್ಷಗಳ ನಂತರ ಆಯಿಷಾ ಹೊಸ ತಕರಾರು ತೆಗೆದಿದ್ದಾರೆ.
ರಾಜಮೌಳಿಯ ‘RRR’ ತಂಡ ಸೇರಿದ ‘ಬಾಹುಬಲಿ’..!
ನೀಲಿ ಚಿತ್ರ ನಿರ್ಮಾಣ : ಸ್ಪೋಟಕ ಮಾಹಿತಿ ಬಹಿರಂಗ -ಲೈವ್ ಸ್ಟ್ರೀಮ್ ಗೆ ರಾಜ್ ಕುಂದ್ರಾ ಪ್ಲಾನಿಂಗ್..!
ಮದುವೆ ಫೇಲ್ , ಅಧ್ಯಾತ್ಮದ ಹಾದಿಯಲ್ಲಿ ಚೈತ್ರಾ ಕೊಟೂರು – “ಮಾ ಪ್ರಜ್ಞಾ ಭಾರತಿ”ಯಾದ ನಟಿ..!
‘ಇಂದ್ರಜಾಲ’ಕ್ಕೆ ಸಿಲುಕಿರುವ ‘ದಾಸ’ – ಲಂಕೇಶ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ








