Priyank Kharge | ಬಸವರಾಜ್ ಬೊಮ್ಮಾಯಿ ಹೇಳೋದೆಲ್ಲ ಬಂಡಲ್
ಕಲಬುರಗಿ : ಸಿಎಂ ಬಸವರಾಜ್ ಬೊಮ್ಮಾಯಿ ಹೇಳೋದೆಲ್ಲ ಬಂಡಲ್ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೇಂದ್ರದಲ್ಲಿ ಮೋದಿ ಸುಳ್ಳು ಹೇಳುತ್ತಾರೆ, ರಾಜ್ಯದಲ್ಲಿ ಬೊಮ್ಮಾಯಿ ಬಂಡಲ್. ಡಬಲ್ ಇಂಜಿನ್ ಮಾಡಿದ್ದು ಬರೀ ಡಬಲ್ ದೋಖಾ ಎಂದು ವ್ಯಂಗ್ಯವಾಡಿದರು.

ಕಲ್ಯಾಣ ಕರ್ನಾಟಕ್ಕೆ ಬಂದು ನಿನ್ನೆ ಏನ್ ಮಾಡಿದ್ರಿ ಸಿಎಂ ಸಾಹೇಬ್ರೆ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಪೊಲೀಸ್ ಕಮೀಷನರ್ ಆಫೀಸ್ ಕಟ್ಟಡ ಉದ್ಘಾಟನೆ ಮಾಡಿದ್ರಲ್ಲಾ ? ಆ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದ್ದ್ಯಾರು ಅಲ್ಲಿರೋ ಕಲ್ಲು ನೋಡಿ. ಕೂಸು ಹುಟ್ಟಿಸೋರು ನಾವು ನಾಮಕರಣ ಮಾಡೋರು ನೀವು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಅಭಿವೃದ್ಧಿ ಮಂಡಳಿಗೆ ನೆಕ್ಟ್ ಬಜೆಟ್ ನಲ್ಲಿ 5 ಸಾವಿರ ಕೋಟಿ ಕೊಡ್ತಾರಂತೆ. ಮುಂದಿನ ಬಜೆಟ್ ಘೋಷಣೆ ಕೇವಲ ಎಲೆಕ್ಷನ್ ಗಿಮಿಕ್ ಎಂದು ರಾಜ್ಯ ಸರ್ಕಾರದ ವಿರುದ್ಧದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.