Priyank Kharge | ಬಿಜೆಪಿ ಸರ್ಕಾರ ಲಂಚ & ಮಂಚದ ಸರಕಾರ
ಬೆಂಗಳೂರು : ಬಿಜೆಪಿ ಸರ್ಕಾರ ಲಂಚ & ಮಂಚದ ಸರಕಾರ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕರ್ನಾಟಕದಲ್ಲಿ ಸರಕಾರಿ ನೌಕರಿ ಸಿಗಬೇಕು ಅಂದ್ರೆ ಯುವಕರು ಲಂಚ ಕೊಡಬೇಕು, ಯುವತಿಯರು ಮಂಚ ಹತ್ತಬೇಕು.
ಇಲ್ಲಾಂದ್ರೆ ಯುವಕ ಯುವತಿಯರಿಗೆ ನೌಕರಿ ಸಿಗಲ್ಲ ಎಂದು ಗಂಭೀರ ಆರೋಪ ಮಾಡಿದರು.

ಇನ್ನ ಕಳೆದ ಮೂರು ವರ್ಷದಲ್ಲಿ ಉದ್ಯೋಗ ಸೃಷ್ಠಿಯಲ್ಲಿ ಈ ಬಿಜೆಪಿ ಸರ್ಕಾರ ಶೂನ್ಯ ಸಾಧನೆ ಮಾಡಿದೆ.
ಇದೊಂದು ಅಸಮರ್ಥ ಸರ್ಕಾರವಾಗಿದೆ. ಉದ್ಯೋಗ ಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಯುವಕರ ಭವಿಷ್ಯದ ಜೋತೆಗೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಈ ಸರಕಾರದಲ್ಲಿ ಪ್ರತಿಯೊಂದು ಹುದ್ದೆ ಮಾರಾಟಕ್ಕಿವೆ ಎಂದು ಕಿಡಿಕಾರಿದರು.