Priyanka Chopra: ಮೋಸದಿಂದ ವಿಶ್ವ ಸುಂದರಿಯಾಗಿದ್ದಾರೆ – 22 ವರ್ಷಗಳ ಬಳಿಕ ಆರೋಪ…
ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಲ್ಲಿ ಮಿಂಚು ಹರಿಸಿ ಹಾಲಿವುಡ್ ನಲ್ಲೂ ನೆಲೆ ಕಂಡುಕೊಳ್ಳುತ್ತಿದ್ದಾರೆ.
ಸದ್ಯ ಅಮೆರಿಕಾದ ಫೇಮಸ್ ಪಾಪ್ ಸಿಂಗರ್ ನಿಕ್ ಜಾನಸ್ ಜೊತೆಗೆ ಮದುವೆಯಾದ ನಂತರದಿಂದ ಅಲ್ಲಿಯೇ ಅಮೆರಿಕಾದಲ್ಲಿ ಪತಿ ಮಗಳ ಜೊತೆಗೆ ವಾಸವಾಗಿದ್ದಾರೆ. ಆದ್ರೆ ಇತ್ತೀಚೆಗೆ ಅಂದ್ರೆ ಸುಮಾರು ಮೂರು ವರ್ಷಗಳ ನಂತರ ತಾಯ್ನಾಡಿಗೆ ಕಾಲಿಟ್ಟಿದ್ದಾರೆ ಪ್ರಿಯಾಂಕಾ ಚೋಪ್ರ. ಅದು ಸಹ ಬಾಲಿವುಡ್ ನ ಸ್ಟಾರ್ ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆಗೆ ಮುಂದಿನ ಸಿನಿಮಾದ ಕೊಲಾಬರೇಷನ್ ಗಾಗಿ ಮುಂಬೈಗೆ ಬಂದಿದ್ದಾರೆ ಎನ್ನಲಾಗ್ತಿದೆ.
ಅಂದ್ಹಾಗೆ ಪ್ರಿಯಾಂಕಾ ಚೋಪ್ರ ಮಾಜಿ ವಿಶ್ವ ಸುಂದರಿ ಅನ್ನೋ ವಿಚಾರ ಎಲ್ಲರಿಗೂ ಗೊತ್ತೇ ಇದೆ.. 22 ವರ್ಷಗಳ ಹಿಂದೆ ಅಂದ್ರೆ 2000 ನೇ ಇಸವಿಯುಲ್ಲಿ ಭಾರತೀಯ ಮೂಲದ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಕಿರೀಟ ತಮ್ಮದಾಗಿಸಿಕೊಂಡಿದ್ದರು,,
ಆದ್ರೆ ಈ ಗೆಲುವು ಸಿಕ್ಕಿದ್ದು ವಾಮಾಚಾರ ಮಾರ್ಗವಾಗಿ ಎಂದು 2000 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ಸಹ ಸ್ಪರ್ಧಿಯಾಗಿದ್ದ ಮಾಜಿ ‘ ಮಿಸ್ ಬಾರ್ಬೋಡಸ್’ ಲೈಲಾನಿ ಮೆಕ್ ಕಾನಿ ಇದೀಗ ಸ್ಪೋಟಕ ಆರೋಪ ಮಾಡಿದ್ದಾರೆ. ಬರೋಬ್ಬರಿ 22 ವರ್ಷಗಳ ನಂತರ ರೀತಿಯಾದ ರೋಪ ಮಾಡಿದ್ದಾರೆ..
ಈ ಕುರಿತು ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಲೈಲಾನಿ ಪ್ರಿಯಾಂಕಾ ಪರ ಸ್ಪರ್ಧೆಯ ಸಂಘಟಕರು , ಪ್ರಾಯೋಜಕರು ಲಾಬಿ ಮಾಡಿದ್ದರು.. ಸ್ಪರ್ಧೆಗೂ ಮುನ್ನವೇ ಫಲಿತಾಂಶವನ್ನ ನಿರ್ಣಯ ಮಾಡಲಾಗಿತ್ತು.
ಸ್ಪರ್ಧೆ ಕೇವಲ ನಾಮಕಾವಸ್ಥೆಗೆ ನಡೆದಿತ್ತು.. ಬಳಿಕ ಪ್ರಿಯಾಂಕಾ ಚೋಪ್ರಾ ಅವರ ಹೆಸರು ಘೋಷಿಸಲಾಯ್ತು ಎಂದು ಹೇಳಿದ್ದಾರೆ.. ಅಲ್ದೇ 1999 ರಲ್ಲೂ ಭಾರತದ ಯುಕ್ತಾ ಮುಖಿ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದರು. 2000ರಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಹೇಗೆ ಗೆದ್ರು ಅನ್ನೋದೇ ಅರ್ಥವಾಗ್ತಿಲ್ಲ ಎಂದಿದ್ದಾರೆ.
Priyanka Chopra has become Miss World by cheating – after 22 years allegation…
ಇದನ್ನೂ ಓದಿ https://saakshatv.com/pregnant-wife-ki…inner-who-killed/








