priyanka chopra : RRR ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಿದ ಪ್ರಿಯಾಂಕ ಚೋಪ್ರಾ….
RRR ಸಿನಿಮಾ ಭಾರತೀಯ ಸಿನಿಮಾರಂಗವಷ್ಟೇ ಅಲ್ದೇ ವಿಶ್ವಾದ್ಯಂತ ಜನರು ಮೆಚ್ಚಿಕೊಂಡ ಸಿನಿಮಾ.. ದಾಖಲೆಗಳ ಮೇಲೆ ದಾಖಲೆ ಬರೆದ ಸಿ ನಿಮಾ.. ಇತ್ತೀಚೆಗೆ ಪ್ರತಿಷ್ಠಿತ ಪ್ರಶಸ್ತಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸಿನಿಮಾದ ನಾಟು ನಾಟು ಹಾಡಿಗೆ ಸಿಕ್ಕಿತ್ತು.. ಎಂ ಎಂ ಕೀರವಾಣಿ ಅವರಿಗೆ ಪ್ರಶಸ್ತಿ ಸಿಕ್ಕಿತ್ತು.. ಈ ಪ್ರಶಸ್ತಿ ಪಡೆದ ಮೊದಲ ಸೌತ್ ಇಂಡಿಯನ್ ಸಿನಿಮಾ , ಎರಡನೇ ಭಾರತೀಯ ಸಿನಿಮಾವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಅಂದ್ಹಾಗೆ ಈ ಸಿನಿಮಾವನ್ನ ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕಾದಲ್ಲಿ ವಿಶೇಷವಾಗಿ ಆಯೋಜನೆ ಮಾಡಿದ್ದಾರೆ. ಹಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ರಾಜಮೌಳಿ ನಿರ್ದೇಶನ , ಜ್ಯೂ. NTR , ರಾಮ್ ಚರಣ್ ನಟನೆಯ RRR ಸಿನಿಮಾದ ವಿಶೇಷ ಪ್ರದರ್ಶನವನ್ನು ನಟಿ ಪ್ರಿಯಾಂಕಾ ಚೋಪ್ರಾ ಆಯೋಜಿಸಿದ್ದರು.
ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದು, ನಿರ್ದೇಶಕ ರಾಜಮೌಳಿ ಮತ್ತು ತೆಲುಗು ಚಲನಚಿತ್ರದ ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಅವರೊಂದಿಗೆ ವೇದಿಕೆಯಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಲ್ಲದೇ ಈ ಅತ್ಯದ್ಭುತ ಭಾರತೀಯ ಚಲನಚಿತ್ರದ ಪಯಣಕ್ಕೆ ನಾನು ಈ ಮೂಲಕವಾದರೂ ಚಿಕ್ಕ ಕೊಡುಗೆ ನೀಡುತ್ತೇನೆ. ಶುಭವಾಗಲಿ ಮತ್ತು ಅಭಿನಂದನೆಗಳು ಎಂದು ತಂಡದ ಸದಸ್ಯರನ್ನು ಟ್ಯಾಗ್ ಮಾಡಿ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. ಇತ್ತ ಪ್ರಿಯಾಂಕಾ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ರಾಜಮೌಳಿ, ನೀವು ಗ್ಲೋಬಲ್ ಸೂಪರ್ ವುಮನ್ ಎಂದು ಶ್ಲಾಘಿಸಿದ್ದಾರೆ.
Priyanka Chopra: Priyanka Chopra organized a special screening of RRR movie.








