ಬೇರೆ ಪಕ್ಷಗಳೊಂದಿಗೆ ಮೈತ್ರಿಗಾಗಿ ಮುಕ್ತ ಮನಸ್ಸು : ಪ್ರಿಯಾಂಕಾ ಗಾಂಧಿ ವಾದ್ರಾ
ಉತ್ತರಪ್ರದೇಶ : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಈಗಾಗಲೇ ಬಿಜೆಪಿ ಕಾಂಗ್ರೆಸ್ ಹಾಗೂ ಪ್ರಾದೇಶಿಇಕ ಪಕ್ಷಗಳು ಕಸರತ್ತು ನಡೆಸುತ್ತಿವೆ.. 403 ವಿಧಾನಸಭಾ ಕ್ಷೇತ್ರಗಳಿಗೆ ಪೈಪೋಟಿ ನಡೆಯಲಿದ್ದು, ಮುಂದಿನ ವರ್ಷ ಉತ್ತರಪ್ರದೇಶದ ಅಧಿಕಾರದ ಚುಕ್ಕಾಣಿಯನ್ನ ಯಾರು ಹಿಡಿಯಲಿದ್ದಾರೆ ಅನ್ನೋ ಕುತೂಹಲ ಈಗಿನಿಂದಲೇ ಕಾಡತೊಡಗಿದೆ..
ಈ ನಡುವೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮೈತ್ರಿ ಮಾಡುಕೊಳ್ಳುವ ನಿರ್ಧಾರ ಹೊಂದಿದ್ಯಾ ಅಥವ ಬಿಜೆಪಿ ವಿರುದ್ಧ ಏಕಾಂಗಿಯಾಗಿಯೇ ಹೋರಾಟ ನಡೆಸಲಿದ್ಯಾ ಅನ್ನೋ ಚರ್ಚೆಗಳು ಆರಂಭವಾಗಿದೆ.. ಆದ್ರೆ ಇದಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತೆರೆ ಎಳೆದಿದ್ದಾರೆ. ಇತರೆ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ತಮ್ಮ ಪಕ್ಷ ಮುಕ್ತ ಮನಸ್ಸು ಹೊಂದಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಇಷ್ಟು ಬೇಗ ಏನೂ ಹೇಳಲು ಸಾಧ್ಯವಿಲ್ಲ. ನಾವು ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುಲು ತೆರೆದ ಮನಸ್ಸನ್ನು ಹೊಂದಿದ್ದೇವೆ ಎಂದಿದ್ದಾರೆ. ಅಲ್ಲದೇ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ. ನಮ್ಮಂತೆ ಬೇರೆ ಪಕ್ಷಗಳು ಮೈತ್ರಿಗಾಗಿ ಸಿದ್ಧವಿರಬೇಕು. ನಾವು ಮೈತ್ರಿಗೆ ತೆರೆದ ಮನಸ್ಸನ್ನು ಹೊಂದಿದ್ಧೇವೆ. ಆದರೆ ನನಗೆ ನಮ್ಮ ಪಕ್ಷವೇ ಮೊದಲ ಆದ್ಯತೆ ಎಂದಿದ್ದಾರೆ.