“ಕಾಶ್ಮೀರದ ಜನರಿಗೆ ನಾನೇ ಬ್ರಾಂಡ್ ಅಂಬಾಸಿಡರ್” – ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್..!
ಭಾರತದ ಬಗ್ಗೆ ಅಥವ ಕಾಶ್ಮೀರದ ಬಗ್ಗೆ ಮಾತನಾಡದೇ ಹೋದ್ರೆ , ಬಾರತೀಯರನ್ನ ಕೆಣಕದೇ ಹೋದ್ರೆ ಪಾಕಿಸ್ತಾನಕ್ಕೆ ಅದ್ರಲ್ಲೂ ಅಲ್ಲಿನ ಪ್ರಧಾನಿಗಳಾದ ಮಾನ್ಯ ಇಮ್ರಾನ್ ಖಾನ್ ಅವರಿಗೆ ಸರಿಯಾದ ನಿದ್ದೆ ಬರೋದಿಲ್ಲ, ತಿಂದ ಅನ್ನ ಅರಗಲ್ಲ ಅಂತ ಕಾನ್ಸುತ್ತೆ.. ಹೀಗಾಗಿ ಪದೇ ಪದೇ ಕಾಶ್ಮೀರದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ.. ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನ ಮಾನ ರದ್ದಾದ ಬಳಿಕವಂತೂ ಇಮ್ರಾನ್ ಖಾನ್ ಅವರು ಆಗಾಗ ಸುಖಾಸುಮ್ಮನೆ ಮೈ ಪರೆಚಿಕೊಳ್ತಾ ಇರುತ್ತಾರೆ.. ಇದೀಗ ಮಾನ ಮರ್ಯಾದೆ ಬಿಟ್ಟು ಒಂದ್ ಹೆಜ್ಜೆ ಮುಂದಕ್ಕೆ ಹೋಗಿರೋ ಇಮ್ರಾನ್ ಖಾನ್ ಸಾಹೇಬರು “ಕಾಶ್ಮೀರಕ್ಕೆ ನಾನೇ ಬ್ರಾಂಡ್ ಅಂಬಾಸಿಡರ್” ಅಂತ ಹೇಳಿ ವಿಶ್ವದ ಮುಂದೆ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು RSS ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೆಲ್ಲವನ್ನೂ ಮೀರಿ ಕಾಶ್ಮೀರಿಗಳ ಬ್ರಾಂಡ್ ಅಂಬಾಸಿಡರ್ ನಾನೇ ಎಂದು ಹೇಳಿಕೊಂಡಿದ್ದಾರೆ. ಪಿಒಕೆಯ ಬಾಗ್ ಪ್ರದೇಶದಲ್ಲಿ ನಡೆದ ಮೊದಲ ಚುನಾವಣಾ ಸಂಬಂಧಿತ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತವು ಭಾರತಕ್ಕೆ ದೊಡ್ಡ ಅಪಾಯವನ್ನುಂಟುಮಾಡಿದೆ. ಏಕೆಂದರೆ ಆ ಸಿದ್ಧಾಂತವು ಮುಸ್ಲಿಮರನ್ನು ಮಾತ್ರ ಗುರಿಯಾಗಿಸಲಿಲ್ಲ. ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಸಾಮಾನ್ಯ ಪ್ರಜೆಗಳೆಂದು ಪರಿಗಣಿಸದ ಪರಿಶಿಷ್ಟ ಜಾತಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ.
2019ರ ಆಗಸ್ಟ್ 5ರ ನಂತರ ಕಾಶ್ಮೀರದಲ್ಲಿ ದೌರ್ಜನ್ಯಗಳು ತೀವ್ರಗೊಂಡಿದೆ ಎಂದು ಹೇಳುವ ಮೂಲಕ 370 ನೇ ವಿಧಿಯನ್ನು ರದ್ದುಗೊಳಿಸುವ ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವನ್ನು ಅವರು ಟೀಕಿಸಿದರು. ಪಾಕಿಸ್ತಾನವು ಕಾಶ್ಮೀರಿಗಳೊಂದಿಗೆ ಮತ್ತು ಅವರ ಪರವಾಗಿ ಬ್ರಾಂಡ್ ಅಂಬಾಸಿಡರ್ ಆಗಿ ಹಾಗೂ ವಕೀಲನಾಗಿ ನಾನು ವಿಶ್ವದಲ್ಲಿ ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದು ಪಡಿಸಿದ ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. 2019ರ ಆಗಸ್ಟ್ 5ರ ಬಳಿಕ ಕಾಶ್ಮೀರದಲ್ಲಿ ದೌರ್ಜನ್ಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ.