ಯೂರೋಪ್ ನಲ್ಲಿ ಭೀಕರ ಪ್ರವಾಹ – 170ಕ್ಕೂ ಹೆಚ್ಚು ಮಂದಿ ಸಾವು , 100 ಕ್ಕೂ ಹೆಚ್ಚು ಜನರು ನಾಪತ್ತೆ..!
ಜರ್ಮನಿ : ಯೂರೋಪ್ ನಲ್ಲಿ ದಾರಾಕಾರ ಮಳೆಯಿಂದಾಗಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಇಲ್ಲಿಯವರೆಗೂ 100 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರ.. ಅದ್ರಲ್ಲೂ ಜರ್ಮನಿ, ಬೆಲ್ಜಿಯಂಗಳಲ್ಲಿ ಪ್ರವಾಹದ ಭೀಕರ ಪರಿಸ್ಥಿತಿ ಮುಂದುವರಿದಿದೆ. ಸಾವಿನ ಸಂಖ್ಯೆ ಈಗ 170ಕ್ಕೆ ಏರಿಕೆಯಾಗಿದೆ. ವಿಪರೀತ ಮಳೆಯಿಂದಾಗಿ ಪರಿಸ್ಥಿತಿ ಕೈಮೀರುತ್ತಿದೆ.. ರಭಸವಾಗಿ ಹರಿಯುತ್ತಿರುವ ನೀರಿಗೆ ಮನೆಗಳು ವಾಹನಗಳು ಕೊಚ್ಚಿಹೋಗುತ್ತಿದ್ದು, ಪ್ರವಾಹದ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿದ್ದು, ನೆಟ್ಟಿಗರನ್ನ ಬೆಚಚ್ಚಿ ಬೀಳಿಸಿದೆ..
ಮುಂಬೈನಲ್ಲಿ ವರುಣನ ರೌದ್ರಾವತಾರ : ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ
ಅನೇಕರು ಜೀವ ಕಳೆದುಕೊಮಡಿದ್ರೆ, ಇನ್ನೂ ಹಲವರು ನಿರಾಶ್ರಿತರಾಗಿದ್ದಾರೆ. ಅನೇಕ ಮನೆಗಳು ಮುಳುಗಿ ಹೋಗಿವೆ..ರಸ್ತೆಗಳೆಲ್ಲ ಜಲಾವೃತ್ತಗೊಂಡಿವೆ. ವಿದ್ಯುತ್ ಲೈನ್ ಗಳೆಲ್ಲ ತುಂಡಾಗಿ ಕರೆಂಟ್ ಇಲ್ಲದ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ಪಶ್ಚಿಮ ಯುರೋಪ್ ರಾಷ್ಟ್ರಗಳ ಪೈಕಿ ಅತ್ಯಂತ ಹೆಚ್ಚಾಗಿ ವಿನಾಶಕ್ಕೀಡಾಗಿದ್ದು, ಜರ್ಮನಿ. ಇಲ್ಲಿ ಕಳೆದ 60 ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರಾಕೃತಿಕ ವಿಕೋಪ ಉಂಟಾಗಿರಲಿಲ್ಲ. ಈಗಿನ ಪ್ರವಾಹ ಪರಿಸ್ಥಿತಿ ಅದೆಷ್ಟು ಕರಾಳವಾಗಿದೆಯೆಂದರೆ ರಕ್ಷಣಾ ಕಾರ್ಯಾಚರಣೆಯನ್ನೂ ಸರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. 100ಕ್ಕೂ ಹೆಚ್ಚು ಜನರು ಈಗಲೂ ಕಾಣೆಯಾಗಿದ್ದಾರೆ.
ಪ್ರವಾಹದಿಂದ ತೀವ್ರ ದುರಂತಕ್ಕೀಡಾದ ಉತ್ತರ ರೈನ್-ವೆಸ್ಟ್ರಾಲಿಯಾ ರಾಜ್ಯದ ಎರ್ಫ್ಟ್‌ಸ್ಟಾಡ್‌ಗೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿದ್ದಾರೆ. ಇದೊಂದೇ ಪ್ರದೇಶದಲ್ಲಿ ಸುಮಾರು 45 ಮಂದಿ ಸಾವನ್ನಪ್ಪಿದ್ದಾರೆ. ಹವಾಮಾನ ಬದಲಾವಣೆಯಿಂದ ಹೀಗೆ ವಿಪರೀತ ಮಳೆಯಾಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇನ್ನುಳಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಂದ ನಾಗರಿಕರನ್ನು ಸುರಕ್ಷಿತವಾಗಿ ಬೇರೆಡೆಗೆ ಸಾಗಿಸುವ ಕಾರ್ಯ ಭರದಿಂದ ಸಾಗುತ್ತಿದೆ. ನೆದರ್ಲ್ಯಾಂಡ್ನಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.