Pro kabaddi 2022 : Bengaluru Bulls : Semifinal : ಇಂದು ಸೆಮಿ ಫೈನಲ್ ಮಹಾಯುದ್ಧದಲ್ಲಿ ‘ಗೂಳಿಗಳ’ ಹೋರಾಟ….
ಬೆಂಗಳೂರು : ಪ್ರೋ ಕಬಡ್ಡಿ 2022 ಆರಂಭವಾದಾಗಿನಿಂದಲೂ ಬೆಂಗಳೂರು ಬುಲ್ಸ್ ಅಬ್ಬರದ ಆಟವನ್ನೇ ಆಡಿದೆ… ಆರಂಭದಿಂದಲೂ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನವನ್ನೇ ಕಾಯ್ದುಕೊಂಡು ಬಂದಿದೆ… ಇದೀಗ ನಾಯಕ ಹಾಗೂ ಸ್ಟಾರ್ ರೈಡರ್ ಪವನ್ ಶೆರಾವತ್ ನೇತೃತ್ವದ ತಂಡ ಎಲಿಮಿನೇಟರ್ ನಲ್ಲಿ ಗುಜರಾತ್ ಜೇಂಟ್ಸ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದೆ..
49 – 29 ಅಂಕಗಳ ಅಂತರದಿಂದ ಗೆದ್ದು ಬೀಗಿದೆ. ಈ ಮೂಲಕ ಸೆಮಿಫೈನಲ್ ಗೆ ಪ್ರವೇಶ ಪಡೆದಿರುವ ಬುಲ್ಸ್ ಇಂದು ಸೆಮಿಫೈನಲ್ ನ ರಣರೋಚಕ ಪಂದ್ಯದಲ್ಲಿ ದಬಾಂಗ್ ಡೆಲ್ಲಿಯನ್ನ ಎದುರಿಸಲಿದೆ… ಇಂದು ಗೆದ್ದರೆ ಗೂಳಿಗಳು ನೇರವಾಗಿ ಫೈನಲ್ ಪ್ರವೇಶಿಸಲಿದ್ದಾರೆ… ಹಾಗಂತ ಇಂದಿನ ಪಂದ್ಯ ಬುಲ್ಸ್ ಗೆ ಸುಲಭವಲ್ಲ… ದಬಾಂಗ್ ಡೆಲ್ಲಿ ಸಹ ಸಿಕ್ಕಾಪಟ್ಟೆ ಬಲಶಾಲಿ ತಂಡವಾಗಿದ್ದು, ಟ್ಯೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಟಾಪ್ 3 ನಲ್ಲೇ ಇದ್ದ ತಂಡ… ಆದ್ರೆ ಈ ಹಿಂದೆ ಬೆಂಗಳೂರಿನ ಜೊತೆಗೆ ಕಾದಾಟದಲ್ಲಿ ಅತ್ಯಂತ ಹೀನಾಯವಾಗಿ ಸೋತಿದ್ದ ತಂಡವೂ ಹೌದು.. ಹೀಗಾಗಿ ಬುಲ್ಸ್ ಗೆ ಕೊಂಚ ಧೈರ್ಯವಿದ್ದರೂ ದಬಾಂಗ್ ಡೆಲ್ಲಿ ಕೂಡ ಫೈನಲ್ ಗಾಗಿ ಹೋರಾಟ ನಡೆಸಲಿದೆ..
ಟೂರ್ನಿಯಲ್ಲಿ ಆರಂಭದಿಂದಲೂ ಸ್ಥಿರ ಪ್ರದರ್ಶನ ನೀಡಿರುವ ದಬಾಂಗ್ ದೆಹಲಿ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದು ನೇರವಾಗಿ ಸೆಮಿಫೈನಲ್ಸ್ ಗೆ ಪ್ರವೇಶ ಪಡೆದುಕೊಂಡಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಎಲ್ಲರ ಚಿತ್ತ ಕದ್ದಿದೆ. ನವೀನ್ ಕುಮಾರ್ ಹಾಗೂ ಪವನ್ ಸೆಹ್ರವಾತ್ ನಡುವಣ ಫೈಟ್ ನೋಡಲು ಅಭಿಮಾನಿಗಳು ಕಾತುರಾಗಿದ್ದಾರೆ.
ಪವನ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ಎಲ್ಲರ ಗಮನ ಸೆಳಿದಿದ್ದಾರೆ. ಪವನ್ ಸೆಹ್ರಾವತ್ ದಾಳಿಯಲ್ಲಿ 23 ಪಂದ್ಯಗಳಲ್ಲಿ 286 ಅಂಕಗಳನ್ನು ಕಲೆ ಹಾಕಿದ್ದಾರೆ. ಇವರು ಒಟ್ಟಾರೆ 17 ಬಾರಿ ಹತ್ತಕ್ಕೂ ಹೆಚ್ಚು ಅಂಕ ಕಲೆ ಹಾಕಿ ಮಿಂಚಿದ್ದಾರೆ. ಪವನ್ ಅವರೊಂದಿಗೆ ದಾಳಿಯಲ್ಲಿ ಭರತ್ ಸಾಥ್ ನೀಡಬೇಕಿದೆ. ಇನ್ನು ದಬಾಂಗ್ ತಂಡದ ಪರ ನವೀನ್ ಕುಮಾರ್ ಆಡಿದ 15 ಪಂದ್ಯಗಳಲ್ಲಿ 180 ಅಂಕ ಸೇರಿಸಿದ್ದಾರೆ. ನವೀನ್ ಎಂಟನೇ ಆವೃತ್ತಿಯ ಪಂದ್ಯದಲ್ಲಿ 10ಕ್ಕೂ ಹೆಚ್ಚು ಬಾರಿ 10ಕ್ಕೂ ಅಧಿಕ ಅಂಕ ಬಾಚಿಕೊಂಡಿದ್ದಾರೆ. ಇವರಿಗೆ ವಿಜಯ್ ಉತ್ತಮ ಸಾಥ್ ನೀಡಬಲ್ಲರು.









