Pro kabaddi 2022 : ಟೈಟನ್ಸ್ – ವಾರಿಯರ್ಸ್ ನಡುವೆ ಡ್ರಾ
ಬೆಂಗಳೂರು : ಸೋಮವಾರ ನಡೆದ ಪ್ರೋ ಕಬಡ್ಡಿ ಲೀಗ್ ನ 101ನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವೆ ರಣರೋಚಕ ಪಂದ್ಯ ನಡೆಯಿತು.. ಈ ಪಂದ್ಯದಲ್ಲಿ ತೆಲುಗು ಟೈಟನ್ಸ್ ಹಾಗೂ ವಾರಿಯರ್ಸ್ ತಂಡಗಳು ಸಮಾಂಕ ಗಳಿಸುವ ಮೂಲಕ ಪಂದ್ಯ ಡ್ರಾ ನಲ್ಲಿ ಅಂತ್ಯ ಕಂಡಿತು..
ಬೆಂಗಾಲ್ ವಾರಿಯರ್ಸ್ ಮತ್ತು ತೆಲುಗು ಟೈಟನ್ಸ್ 32 ಅಂಕಗಳನ್ನ ಪಡೆದುಕೊಂಡವು.. ಈ ಪಂದ್ಯದ ಬಳಿಕ ತೆಲುಗು 26 ಅಂಕಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಖಾಯಂ ಮಾಡಿಕೊಂಡಿದೆ. ಇತ್ತ ಬೆಂಗಾಲ್ ಪಂದ್ಯದ ಬಳಿಕ 44 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
T20 Worldcup 2022 : ಇಂಡೋ- ಪಾಕ್ ಮ್ಯಾಚ್ : ಒಂದೇ ಗಂಟೆಯಲ್ಲಿ ಟಿಕೆಟ್ ಸೋಲ್ಡ್ ಔಟ್..!!!
ವಾರಿಯರ್ಸ್ ಪರ ಮಣಿಂದರ್ ಸಿಂಗ್ 11, ಮನೋಜ್ 6 ಅಂಕ ಕಲೆ ಹಾಕಿದರೆ, ಟೈಟಾನ್ಸ್ ಪರ ರಜನಿಶ್ 7, ಅಂಕಿತ್ ಬೆನಿವಾಲ್ 9 ಅಂಕ ಗಳಿಸಿದರು.
ಬೆಂಗಾಲ್ 37 ಬಾರಿ ದಾಳಿ ನಡೆಸಿ 12 ಅಂಕ ಕಲೆ ಹಾಕಿದರೆ, ಟೈಟಾನ್ಸ್ 38 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ 15 ಅಂಕ ಬಾಚಿಕೊಂಡಿತು. ಈ ವೇಳೆ ಬೆಂಗಾಲ್ ಒಂದು ಬಾರಿ ಸೂಪರ್ ರೈಡ್ ನಡೆಸಿತು.