ಡ್ರಗ್ಸ್ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ ತಮಿಳು ನಿರ್ಮಾಪಕ ಹಾಗೂ ರಾಜಕಾರಣಿ ಜಾಫರ್ ಸಾದಿಖ್ನನ್ನು ಬಂಧಿಸಲಾಗಿದೆ.
ಎನ್ಸಿಬಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾದಕವಸ್ತು ಕಳ್ಳಸಾಗಣೆಯ ಆರೋಪ ನಿರ್ಮಾಪಕನ ವಿರುದ್ಧ ಕೇಳಿ ಬಂದಿದೆ. ಬಂಧನದ ನಂತರ ಈತನೊಬ್ಬ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾದ ಮಾಸ್ಟರ್ ಮೈಂಡ್ ಆಗಿದ್ದಾನೆ ಎಂದು ಎನ್ ಸಿಬಿ ಆರೋಪಿಸಿದೆ.
ಬಂಧಿತ ಜಾಫರ್ ಹಲವು ಚಿತ್ರಗಳನ್ನು ನಿರ್ಮಿಸಿದ್ದಾನೆ. ಡಿಎಂಕೆ ಪಕ್ಷದ ಸದಸ್ಯನಾಗಿಯೂ ಗುರುತಿಸಿಕೊಂಡಿದ್ದಾನೆ. ಸದ್ಯ ಈತನನ್ನು ಪಕ್ಷ ಉಚ್ಛಾಟಿಸಿದೆ. ಈತ ಅಪಾಯಕಾರಿ ಡ್ರಗ್ಸ್ಗಳನ್ನು ಬೇರೆ ಬೇರೆ ದೇಶಗಳಿಗೆ ಕಳುಹಿಸುತ್ತಿದ್ದ ಎನ್ನಲಾಗಿದೆ. ಡ್ರೈ ಪ್ರೂಟ್ಸ್ ಪ್ಯಾಕೆಟ್, ಒಣಗಿದ ತೆಂಗಿನ ಕಾಯಿ ಹೀಗೆ ಹಲವು ವಸ್ತುಗಳ ಮೂಲಕ ಡ್ರಗ್ಸ್ ಸಾಗಾಣಿಕೆ ಮಾಡುತ್ತಿದ್ದ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.