ಬೆಂಗಳೂರು: ಒಂದೆಡೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿರುವ ಬಿಜೆಪಿ, ಕಾಂಗ್ರೆಸ ಸರ್ಕಾರದ ವಿರುದ್ಧ ಆರೋಪ ಮಾಡಿದೆ. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ (Congress) ಸುಳ್ಳಿನ ಭರವಸೆಯ ಮೇಲೆ ಅಧಿಕಾರಕ್ಕೆ ಬಂದಿದೆ. ಈಗ ತಾನು ನೀಡಿದ್ದ ಗ್ಯಾರಂಟಿ (Congress Guarantee) ಪೂರ್ಣ ಜಾರಿ ಮಾಡದೆ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಯಾವ ಕ್ಷೇತ್ರದಲ್ಲಿಯೂ ಗೆಲ್ಲದ ಪರಿಸ್ಥಿತಿಯಲ್ಲಿ. ಹೀಗಾಗಿ ದೆಹಲಿ ಚಲೋ ನಾಟಕವಾಡುತ್ತಿದೆ. ರೈತರ ಸಂಕಷ್ಟಕ್ಕೆ ಕಾಂಗ್ರೆಸ್ ಸ್ಪಂದಿಸುತ್ತಿಲ್ಲ. ಸದ್ಯ ಅಧಿಕಾರ ನಡೆಸಲು ಆಗದೆ ಕೇಂದ್ರದ ವಿರುದ್ಧ ಗೂಬೆ ಕೂಡಿಸುವ ಕಾರ್ಯ ಮಾಡುತ್ತಿದೆ. ಕೃಷ್ಣ ಮೇಲ್ದಂಡೆಗೆ ಇವರು ಒಂದು ರೂಪಾಯಿ ನೀಡಿಲ್ಲ. ಮೇಕೆದಾಟು ಹೋರಾಟ, ದೆಹಲಿ ಚಲೋ ಕೇವಲ ನಾಟಕ. ಬೊಮ್ಮಾಯಿ ಸಿಎಂ ಆಗಿದ್ದಾಗ 7,800 ಕೋಟಿ ರೂ. ಹಣವನ್ನು ಮಹದಾಯಿಗೆ ಬಿಡುಗಡೆ ಮಾಡಲು ಮುಂದಾದಾಗ ಇದೇ ಕಾಂಗ್ರೆಸ್ ತಡೆದಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸಂಸದರು, ಶಾಸಕರು ಪ್ರತಿಭಟನೆಯಲ್ಲಿದ್ದರು.