ಪ್ರಚೋದನಾಕಾರಿ ಹೇಳಿಕೆ ಕೊಟ್ಟೋರ ವಿರುದ್ಧ ಸೂಕ್ತ ಕಾನೂನು ಕ್ರಮ… ಕೋಡಿ ಹಳ್ಳಿ ಚಂದ್ರಶೇಖರ್ ಆಗಬಹುದು ಅಥವಾ ಬೇರೆ ಯಾರೇ ಆಗಬಹುದು – ಸಿ ಎಸ್ ರವಿಕುಮಾರ್
ಬೆಂಗಳೂರು : ಪ್ರತಿ ದಿನ ಸಾರಿಗೆ ಇಲಾಖೆಯಿಂದ 4 ಕೋಟಿ ಲಾಸ್ ಆಗ್ತಾ ಇದೆ. ಹೆಚ್ಚುವರಿ ಸ್ಟೇಷಲ್ ಟ್ರೈನ್ ಹಾಕಲು ಮನವಿ ಮಾಡಿದ್ದೇವೆ ಎಂದು ಸಿ ಎಸ್ ರವಿಕುಮಾರ್ ಹೇಳಿದ್ದಾರೆ. ಅಲ್ದೇ ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ಖಾಸಗಿ ಬಸ್ ,ಸ್ಕೂಲ್ ಬಸ್ ಯಾರೂ ಬೇಕಾದ್ರೂ ಓಡಿಸಬಹುದು ಎಂದು ಫ್ರೀ ಪರ್ಮಿಟ್ ನೀಡಲಾಗಿದೆ.
ಸಾರ್ವಜನಿಕರಿಗೆ ತೊಂದರೆ ಆಗಬಾರದು. ಯಾರೇ ಪ್ರಚೋದನಾಕಾರಿ ಹೇಳಿಕೆ ಕೊಟ್ರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಅದು ಕೋಡಿ ಹಳ್ಳಿ ಚಂದ್ರಶೇಖರ್ ಆಗಬಹುದು ಅಥವಾ ಬೇರೆ ಯಾರೇ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ 9 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆ ಈಡೇರಿಸಿದ್ದೇವೆ. 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಸಾಧ್ಯವಿಲ್ಲ. ಆದ್ರೆ 8 % ವೇತನ ಹೆಚ್ಚಳಕ್ಕೆ ಸರ್ಕಾರ ಸಿದ್ದವಿದೆ. ಆದ್ರೇ ನೀತಿ ಸಂಹಿತೆ ಇರೋದ್ರಿಂದ ಘೋಷಣೆ ಮಾಡೋಕೆ ಆಗಲ್ಲ.. ಚುನಾವಣಾ ಆಯೋಗ ಅನುಮತಿ ಕೊಟ್ರೇ ಘೋಷಣೆ ಮಾಡ್ತೀವಿ. ಇಲ್ಲಾಂದ್ರೇ ಚುನಾವಣೆ ಬಳಿಕ ಘೋಷಣೆ ಮಾಡ್ತೀವಿ ಎಂದಿದ್ದಾರೆ.