ಆಟೋದಲ್ಲಿ ಪ್ರೇಮಿಗಳ ಅಶ್ಲೀಲ ವರ್ತನೆ ; ಆಕ್ಷೇಪಿಸಿದ್ದಕ್ಕೆ ಚಾಲಕನನ್ನೇ ಕೊಲೆ ಮಾಡಿದ ಪ್ರೇಮಿಗಳು…
ಆಟೋ ರಿಕ್ಷಾದಲ್ಲಿ ಅಶ್ಲೀಲವಾಗಿ ವರ್ತಿಸದಂತೆ ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟಾದ ಪ್ರೇಮಿಗಳು ಆಟೋ ಚಾಲಕನನ್ನೇ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಪುಣೆಯ ಗಣೇಶ್ ಗಾರ್ಡನ್ ಪ್ರದೇಶದಲ್ಲಿ ನಿನ್ನೆ ಸಂಜೆ 4.30ರ ಸುಮಾರಿಗೆ ನಡೆದಿದೆ.
ಮೃತ ವ್ಯಕ್ತಿಯನ್ನ ಪಿಂಪಲ್ ಗುರವ ನಿವಾಸಿ ಇಸ್ಮಾಯಿಲ್ ಶೇಖ್ (42) ಎಂದು ಗುರುತಿಸಲಾಗಿದೆ. ಅಮಿತ್ ಮತ್ತು ಆತನ ಪ್ರೇಯಸಿ ಆಟೋದಲ್ಲಿ ಕುಳಿತು ಅಶ್ಲೀಲವಾಗಿ ವರ್ತಿಸುವುದನ್ನ ನೋಡಿ ಚಾಲಕ ಇಸ್ಮಾಯಿಲ್ ಶೇಖ್ ಗದರಿದ್ದಾರೆ. ಈ ನಡುವೆ ಅಮಿತ್ ಮತ್ತು ಆಟೋ ಚಾಲನ ನಡುವೆ ಬಾರಿ ವಾಗ್ವಾದ ನಡೆದಿದೆ. ಸಿಟ್ಟಿಗೆದ್ದ ಅಮಿತ್ ಗೆಳಯ ಸಾಗರ್ ಮಾನೆ ಎಂಬುವವರಿಗೆ ಕರೆ ಮಾಡಿದ್ದಾನೆ. ನಂತರ ಇಬ್ಬರು ಗೆಳಯರಿಬ್ಬರು ಸೇರಿಕೊಂಡು ಕಲ್ಲು ಮತ್ತು ಸಿಮೆಂಟ್ ಇಟ್ಟಿಗೆಯಿಂದ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅಲಿ ಅವರನ್ನ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ತನ್ನ ಸಹೋದರ ಹತ್ಯೆಯ ಬಗ್ಗೆ ಆಸಿಫ್ ಇಸ್ಮಾಯಿಲ್ ಶೇಕ್ ಪೊಲೀಸ್ ದೂರು ನೀಡಿದ್ದಾರೆ. ಅದರಂತೆ ಐಪಿಸಿ ಸೆಕ್ಷನ್ 302, 323, 324, 504 ಮತ್ತು 506ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಮಿತ್ ಬಾಳಾಸಾಹೇಬ್ ಕಾಂಬಳೆ (26) ಎಂಬಾತನನ್ನ ಬಂಧಿಸಿದ್ದಾರೆ.
Pune Crime: Indecent behavior of lovers in auto; The lovers killed the driver for objecting…