“ಯಾರಿಗೆ ಬೇಕು ಈ ಲೋಕ”ದ ಫಸ್ಟ್ ಲುಕ್ ನವೆಂಬರ್ 15ಕ್ಕೆ ರಿಲೀಸ್..! ಅಪ್ಪುಗೆ ಅರ್ಪಣೆ..!

1 min read

“ಯಾರಿಗೆ ಬೇಕು ಈ ಲೋಕ”ದ ಫಸ್ಟ್ ಲುಕ್ ನವೆಂಬರ್ 15ಕ್ಕೆ ರಿಲೀಸ್..! ಅಪ್ಪುಗೆ ಅರ್ಪಣೆ..!

ಬೆಂಗಳೂರು : ಸ್ಯಾಂಡಲ್ ವುಡ್  ಸಿನಿಮಾ “ಯಾರಿಗೆ ಬೇಕು ಈ ಲೋಕ”ದ   ಫಸ್ಟ್ ಲುಕ್ ಪೋಸ್ಟರ್ ಅನ್ನು ನವೆಂಬರ್ 15 ಕ್ಕೆ ಸಿನಿಮಾ ತಂಡ ರಿಲೀಸ್ ಮಾಡ್ತಿದೆ.. ಈ ಪೋಸ್ಟರ್ ಅನ್ನು ಸಿನಿಮಾತಂಡ ಇತ್ತೀಚೆಗಷ್ಟೇ ನಮ್ಮನ್ನೆಲ್ಲಾ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿದೆ..

ಆರ್ಯವರ್ಧನ್ ನಾಯಕರಾಗಿ ಅಭಿನಯಿಸುತ್ತಿರುವ “ಯಾರಿಗೆ ಬೇಕು ಈ ಲೋಕ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನವೆಂಬರ್ 15 ರಂದು ಬಿಡುಗಡೆಯಾಗಲಿದೆ.‌‌ ಆರ್ಯವರ್ಧನ್ ಅವರಿಗೆ ನಾಯಕಿಯರಾಗಿ‌ ಪ್ರಿಯಾಂಕ ರಿವಾರಿ, ಪಾವನಿ ಹಾಗೂ ವರ್ಷ ನಟಿಸುತ್ತಿದ್ದಾರೆ.

ಇನ್ನೂ ಈ ಸಿನಿಮಾದಲ್ಲಿ ಹಿರಿಯ ನಟ ವಿನೋದ್ ಕುಮಾರ್, ರಚ ರವಿ, ರಾಮು (ಜ್ಯೂನಿಯರ್ ರಾಜಕುಮಾರ್), ಶೋಭನ್ ಅಕ್ಷರ್  ಸೇರಿದಂತೆ ದೊಡ್ಡ ತಾರಾಬಳಗವಿದೆ.  ಎಂ.ರಮೇಶ್‌ ಹಾಗೂ ಗೋಪಿ ಜಂಟಿಯಾಗಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಬಿ.ಶ್ರೀನಿವಾಸ ರಾವ್ ಹಾಗೂ ರೋಶಿನಿ ನೌಡಿಯಲ್ ನಿರ್ಮಿಸುತ್ತಿದ್ದಾರೆ.

ಮಹಿತ್ ನಾರಾಯಣ್ ಅವರ ಸಂಗೀತ ಚಿತ್ರಕ್ಕಿದೆ.. ಚಿತ್ರಕ್ಕೆ ಶ್ರೀ ವಸಂತ್ ಅವರ ಹಿನ್ನೆಲೆ ಸಂಗೀತವಿದೆ. ಎ.ಕೆ.ಆನಂದ್ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ  ಸಿನಿಮಾಗಿದೆ.

“ಮೆಲ್ಲನೆ ಬೆರಳು ಬೆಸೆದು ನಡೆಯುವ ಚೂರು ದೂರ” ಅಂತ ನಾಯಕಿ ಜೊತೆ ನಿಖಿಲ್ ಡ್ಯುಯೆಟ್ : ರೈಡರ್ ಸಾಂಗ್ ರಿಲೀಸ್..!

ನವೆಂಬರ್ 16ರಂದು ‘ಪುನೀತ್ ನಮನ’ ಕಾರ್ಯಕ್ರಮ – ಇಡೀ ಕನ್ನಡ ಚಿತ್ರರಂಗಕ್ಕೆ ರಜೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd