BJP | ಪಿಡಬ್ಲ್ಯೂಡಿ ಪತ್ರಿಕೆ ಲೀಕ್ ಹಿಂದೆಯೂ ಕಾಂಗ್ರೆಸ್ ʼಹಸ್ತʼ
ಬೆಂಗಳೂರು : ಪಿಡಬ್ಲ್ಯೂಡಿ ಪತ್ರಿಕೆ ಲೀಕ್ ಹಿಂದೆಯೂ ಕಾಂಗ್ರೆಸ್ ʼಹಸ್ತʼವಿದೆ ಎಂದು ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಆರೋಪಿಸಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಪ್ರತಿ ಹಗರಣಗಳ ಬುಡ ಅಗೆದಾಗ, ಅದರ ಬೇರುಗಳು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯನ್ನು ತಲುಪುತ್ತಿದೆ! ಪಿಎಸ್ಐ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಅತ್ಯಾಪ್ತರ ಬಂಧನವಾಗಿದ್ದು, ಪಿಡಬ್ಲ್ಯೂಡಿ ಪತ್ರಿಕೆ ಲೀಕ್ ಹಿಂದೆಯೂ ಕಾಂಗ್ರೆಸ್ ʼಹಸ್ತʼವಿದೆ. ಭ್ರಷ್ಟನೊಬ್ಬ ಪಕ್ಷದ ಸಾರಥಿಯಾದರೆ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಬಿಜೆಪಿ ಕುಟುಕಿದೆ.
ಕಲಬುರ್ಗಿಯ ಕಾಂಗ್ರೆಸ್ ಮುಖಂಡನಿಗೆ ಸೇರಿದ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಪತ್ರಿಕೆ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ದಂಧೆಯ ಹಣ ಸದಾಶಿವ ನಗರದ ಭವ್ಯ ಬಂಗಲೆಗೆ ರವಾನೆಯಾಗುತ್ತಿತ್ತೇ?#ಭ್ರಷ್ಟಾಧ್ಯಕ್ಷ ರೇ ಏನು ಹೇಳುವಿರಿ ಇದಕ್ಕೆ?#CorruptionAndCONgress
— BJP Karnataka (@BJP4Karnataka) April 27, 2022
ಕಲಬುರ್ಗಿಯ ಕಾಂಗ್ರೆಸ್ ಮುಖಂಡನಿಗೆ ಸೇರಿದ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಪತ್ರಿಕೆ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ದಂಧೆಯ ಹಣ ಸದಾಶಿವ ನಗರದ ಭವ್ಯ ಬಂಗಲೆಗೆ ರವಾನೆಯಾಗುತ್ತಿತ್ತೇ? #ಭ್ರಷ್ಟಾಧ್ಯಕ್ಷ ರೇ ಏನು ಹೇಳುವಿರಿ ಇದಕ್ಕೆ ಎಂದು ಪಶ್ನಿಸಿದ್ದಾರೆ.
https://twitter.com/BJP4Karnataka/status/1519207806821445632?s=20&t=2loSsDtqydScHygAMocFxA
ಮಾಧ್ಯಮದವರ ಮುಂದೆ ಪ್ರಕರಣದ ತನಿಖಾಧಿಕಾರಿಯಂತೆ ವರ್ತಿಸುವ ಕಾಂಗ್ರೆಸ್ ನಾಯಕರು, ತನಿಖೆಗೆ ಸಹಕರಿಸುವಂತೆ ಪೊಲೀಸ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದಾಗ ಕಳ್ಳರಂತೆ ಹಿಂದೆ ಸರಿದ್ದೇಕೆ? ಕಾಂಗ್ರೆಸ್ ನಾಯಕರ ಕಳ್ಳ-ಪೊಲೀಸ್ ಆಟದ ಹಿಂದೆ ಡಿ.ಕೆ.ಶಿವಕುಮಾರ್ ಪಾತ್ರವಿರುವುದು ನಿಜವಲ್ಲವೇ ಎಂದು ಬಿಜೆಪಿ ಕುಟುಕಿದೆ. pwd paper leak bjp slams Congress