ಸಿಎಂ ಬಳಿ ಬಂದು ಈಶ್ವರಪ್ಪ ಚರ್ಚೆ ಮಾಡಬಹುದಿತ್ತು , ಇದು ಒಳ್ಳೆಯ ಬೆಳವಣಿಗೆಯಲ್ಲ – ಆರ್ ಅಶೋಕ್
ಸಚಿವ ಈಶ್ವರಪ್ಪ ಹಾಗೂ ಗವರ್ನರ್ ಹಾಗೂ ಕೇಂದ್ರದ ನಾಯಕರಿಗೆ ಬರೆದ ಪತ್ರ ನೋಡಿದ್ದೇವೆ. ಸಿಎಂ ಬಿಎಸ್ ವೈ ನೇತ್ರತ್ವದಲ್ಲಿ ಚುನಾವಣೆ ಎದುರಿಸಿ. ಸಿಎಂ ಯಡಿಯೂರಪ್ಪರವರ ಪರಮಾಧಿಕಾರ ದಲ್ಲಿ ಸಚಿವರು ಆದವರು ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಸಿಎಂ ಬಿಎಸ್ ವೈ ವಿರುದ್ಧ ಈಶ್ವರಪ್ಪ ದೂರು ಸಲ್ಲಿಕೆ ವಿಚಾರವಾಗಿ ಮಾತನಾಡಿದ ಆರ್ ಅಶೋಕ್ ಈಗ ಆಗಿರುವ ಬೆಳವಣಿಗೆ ಒಳ್ಳೆ ಬೆಳವಣಿಗೆ ಅಲ್ಲ. ಸಿಎಂ ಬಳಿ ಬಂದು ಅವರು ಚರ್ಚೆ ಮಾಡಬಹುದಿತ್ತು. ಇದು ಬಿಜೆಪಿ ಸಂಸ್ಕೃತಿ ಅಲ್ಲ. ಅವರಲ್ಲಿ ಏನಾದ್ರೂ ಅಸಮಾಧಾನ ಇದ್ರೆ ಸಿಎಂ ಬಳಿ ಮಾತಾಬೇಕು. ಹೀಗೆ ಪತ್ರ ಬರೆಯೋದು ಒಳ್ಳೆ ಬೆಳವಣಿಗೆ ಅಲ ಎಂದಿದ್ದಾರೆ.
ಸಿಡಿ ಕೇಸ್ – SIT ಬದಲು CBIಗೆ ಕೊಟ್ಟಿದ್ರೆ ಸತ್ಯ ಹೊರ ಬರ್ತಿತ್ತು.








