ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್ 1 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಗಳ ಸಾಧನೆ ಮಾಡಿದ್ದಾರೆ.
ಈ ಮೂಲಕ ಟೆಸ್ಟ್ ಇತಿಹಾಸದಲ್ಲಿಯೇ ವೇಗವಾಗಿ 500 ವಿಕೆಟ್ ಕಬಳಿಸಿದ ಟಾಪ್-5 ಬೌಲರ್ಗಳ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಅನಿಲ್ ಕುಂಬ್ಳೆ ದಾಖಲೆ ಮುರಿದಿದ್ದಾರೆ ಎಂಬುವುದು ವಿಶೇಷ. ಆಸ್ಟ್ರೇಲಿಯಾ ಪರ 124 ಟೆಸ್ಟ್ ಪಂದ್ಯಗಳನ್ನಾಡಿರುವ ಗ್ಲೆನ್ ಮೆಕ್ಗ್ರಾಥ್ 214 ಇನಿಂಗ್ಸ್ ಗಳ ಮೂಲಕ 500 ವಿಕೆಟ್ಗಳ ಸಾಧನೆ ಮಾಡಿದ್ದಾರೆ.
ಶೇನ್ ವಾರ್ನ್ 108 ಟೆಸ್ಟ್ ಪಂದ್ಯಗಳಲ್ಲಿ 201 ಇನಿಂಗ್ಸ್ ಆಡಿ 500 ವಿಕೆಟ್ ಕಬಳಿಸಿದ್ದರು. 500ಕ್ಕೂ ಅಧಿಕ ವಿಕೆಟ್ ಪಡೆದ ಇಂಡಿಯಾದ ಮೊದಲ ಬೌಲರ್ ಎಂಬ ದಾಖಲೆ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ. ಕುಂಬ್ಳೆ 189 ಟೆಸ್ಟ್ ಇನಿಂಗ್ಸ್ ಮೂಲಕ 500 ವಿಕೆಟ್ಗಳ ಸಾಧನೆ ಮಾಡಿದ್ದರು. ಅಶ್ವಿನ್ ಕೇವಲ 184 ಇನಿಂಗ್ಸ್ಗಳಲ್ಲಿ 500 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಅತೀ ವೇಗವಾಗಿ 500 ಟೆಸ್ಟ್ ವಿಕೆಟ್ ಪಡೆದ ವಿಶ್ವದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವ ದಾಖಲೆ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದ್ದು, 144 ಇನಿಂಗ್ಸ್ಗಳ ಮೂಲಕ 500 ವಿಕೆಟ್ ಪಡೆದಿದ್ದಾರೆ.