ಪ್ರೇಮಿಗಳ ದಿನಕ್ಕೆ ರಾಧೇ ಶ್ಯಾಮ್ ಗ್ಲಿಂಪ್ಸ್ ಗಿಫ್ಟ್ ಕೊಟ್ಟ ಪ್ರಭಾಸ್….
ಡಾರ್ಲಿಂಗ್ ಪ್ರಭಾಸ್ ನಟನೆಯ ಅದ್ಭುತ ದೃಶ್ಯ ಕಾವ್ಯದ ಸಿನಿಮಾ ರಾಧೆ ಶ್ಯಾಮ್ ನ ಗ್ಲಿಂಪ್ಸ್ ಪ್ರೇಮಿಗಳ ದಿನದ ಪ್ರಯುಕ್ತ ರಿಲೀಸ್ ಆಗಿದೆ.
ರಾಧಾಕೃಷ್ಣ ಕುಮಾರ್ ಎಂಬುವವರು ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಚಿತ್ರವು ಯುರೋಪ್ ಹಿನ್ನಲೆಯಲ್ಲಿ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ನಾಯಕಿಗೆ ಪ್ರೇಮ ನಿವೇದನೆ ಮಾಡುವ ಸಣ್ಣ ವೀಡಿಯೋ ತುಣುಕನನ್ನ ಚಿತ್ರತಂಡ ಹಂಚಿಕೊಂಡಿದೆ.
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೊತೆಗೆ, ಚಿತ್ರದಲ್ಲಿ ಸಚಿನ್ ಖೇಡೇಕರ್, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರಳಿ ಶರ್ಮಾ, ಕುನಾಲ್ ರಾಯ್ ಕಪೂರ್, ರಿದ್ಧಿ ಕುಮಾರ್, ಸಾಶಾ ಚೆಟ್ರಿ ಮತ್ತು ಸತ್ಯನ್ ಕೂಡ ನಟಿಸಿದ್ದಾರೆ. ರಾಧೆ ಶ್ಯಾಮ್ ಅನ್ನು ವಂಶಿ, ಪ್ರಮೋದ್ ಮತ್ತು ಪ್ರಸೀದಾ ಉಪ್ಪಲಪಾಟಿ, ಟಿ-ಸೀರೀಸ್ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ.
ಕರೋನಾ ಕಾರಣದಿಂದಾಗಿ ಸಿನಿಮಾ ಬಿಡುಗಡೆಯ ದಿನಾಂಕಗಳನ್ನು ಹಲವು ಬಾರಿ ಮುಂದೂಡಲಾಗಿತ್ತು. ರಾಧೆ ಶ್ಯಾಮ್ ಈಗ ಮಾರ್ಚ್ 11 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.