Tollywood Updates : ಥಿಯೇಟರ್ ಗಳಲ್ಲಿ ರಿಲೀಸ್ ಆಗುವುದಿಲ್ಲ ‘ರಾಧೆಶ್ಯಾಮ್’..!!!
ಕೊರೊನಾ ಹಾವಳಿಯಿಂದಾಗಿ RRR , ರಾಧೆ ಶ್ಯಾಮ್ ಸೇರಿದಂತೆ ಹಲವು ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾಗಳ ರಿಲೀಸ್ ದಿನಾಂಕ ಮುಂದೂಡಿಕೆಯಾಯ್ತು.. ಈ ನಡುವೆ ಇತ್ತೀಚೆಗೆ ಹರಿದಾಡಿದ್ದ ಸೆನ್ಷೇಷನಲ್ ಸುದ್ದಿಯಂತೆ , ಬಾಹುಬಲಿ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾಗೆ ಅಮೇಜಾನ್ ನಿಂದ ನೇರ ರಿಲೀಸ್ ಗಾಗಿ 350 ಕೋಟಿ ರೂ. ಆಫರ್ ಬಂದಿತ್ತು ಎನ್ನಲಾಗಿದೆ..
ಮತ್ತೊಂದೆಡೆ ಥಿಯೇಟರ್ ಗಳು ಬಂದ್ , 50 % ಸೀಟಿಂಗ್ ನಿಂದ ಬಿಗ್ ಬಜೆಟ್ ಸಿನಿಮಾಗಳು ತೊಂದರೆಯಲ್ಲಿವೆ.. ಪ್ರಭಾಸ್ ಅಭಿನಯದ ‘ರಾಧೆ ಶ್ಯಾಮ್’ ಸಿನಿಮಾ. ಸಿನಿಮಾವನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡದೆ ಇರಲು ನಿರ್ಧಾರ ಮಾಡಲಾಗಿದೆಯಂತೆ. ಸಿನಿಮಾವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ ಎಂಬ ಸುದ್ದಿ ಸದ್ಯ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೇ ಅಮೇಜಾನ್ ಬದಲಾಗಿ ನೆಟ್ ಫ್ಲಿಕ್ಸ್ 400 ಕೋಟಿ ರೂಪಾಯಿ ಆಫರ್ ನೀಡಿದ್ದು ಒಟಿಟಿಯಲ್ಲೇ ಸಿನಿಮಾವನ್ನ ರಿಲೀಸ್ ಮಾಡುವ ಚಾನ್ಸಸ್ ಹೆಚ್ಚು ಎನ್ನಲಾಗ್ತಿದೆ.
ನಟ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಸಿನಿಮಾ ತೆಲುಗು , ತಮಿಳು , ಹಿಂದಿ , ಕನ್ನಡ , ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ದೊಡ್ಡ ಆಫರ್ ಬಂದಿದೆ ಅಂತೆ. ಒಟಿಟಿ ವೇದಿಕೆ ಆದ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಒಟಿಟಿಯಲ್ಲೇ ತೆರೆಕಾಣಲಿದೆ ಎನ್ನಲಾಗ್ತಿದೆ.