ಚಂದನವನದ ಚೆಲುವೆ ರಾಧಿಕಾ ಕುಮಾರಸ್ವಾಮಿ (Radhika Kumarswamy) ಅವರು ತಮ್ಮ ಅಭಿಮಾನಿಗಳಿಗೆ ಬಿಗ್ ಆಫರ್ ಕೊಟ್ಟಿದ್ದಾರೆ.
ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಲು ನಿರ್ಧಿರಿಸಿದ್ದು, ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ನವೆಂಬರ್ 11ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ, ಇತ್ತೀಚೆಗೆ ಕೆಲವು ವರ್ಷಗಳಿಂದ ಅವರು ಹುಟ್ಟು ಹಬ್ಬ ಆಚರಣೆಯಿಂದ ದೂರವಿದ್ದರು. ಆದರೆ, ಈ ಬಾರಿ ಅಭಿಮಾನಿಗಳಿಗೆ ಸಮಯ ನೀಡಲು ಮುಂದಾಗಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಅವರು, ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಹಲವು ವರ್ಷಗಳಿಂದ ಅಭಿಮಾನಿಗಳನ್ನ ಭೇಟಿ ಮಾಡೋಕೆ ಆಗಿರಲಿಲ್ಲ. ನ.11ರಂದು ಶನಿವಾರ ನನ್ನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ. ಅಂದು ನಿಮಗೆ ಸಿಗುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೇ, ರಾಧಿಕಾ ಅವರು ಅಭಿಮಾನಿಗಳಿಗೆ ವಿಳಾಸವನ್ನು ಕೂಡ ನೀಡಿದ್ದಾರೆ. 10/11 ಎರಡನೇ ಮುಖ್ಯ ರಸ್ತೆ, ಎರಡನೇ ಕ್ರಾಸ್ ಆರ್ಎಂವಿ ಎರಡನೇ ಸ್ಟೇಜ್, ಮೂರನೇ ಬ್ಲಾಕ್ ನ್ಯೂ ಬೆಲ್ ರೋಡ್, ಡಾಲರ್ಸ್ ಕಾಲೋನಿ ಬೆಂಗಳೂರು ಎಂದು ಮಾಹಿತಿ ನೀಡಿದ್ದಾರೆ.