Rafael Nadal : ಸೋಲಿನ ಆರಂಭದಿಂದ ಕುಗ್ಗಿಲ್ಲ – ನಡಾಲ್
ಅಗ್ರ ಟೆನಿಸ್ ಅಟಗಾರ ರಾಫಾಲ್ ನಡಾಲ್ ಸೋಲುವ ಮೂಲಕ ವರ್ಷದ ಆರಂಭ ಮಾಡಿದ್ದರೂ ಫಾರ್ಮ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಸೋಮವಾರ ಯುನೈಟೆಡ್ ಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಆ್ಯಲೆಕ್ಸ್ ಡಿ ಮಿನಾರ್ ವಿರುದ್ಧ ಸೋಲುವ ಮೂಲಕ ಸತತ ಎರಡನೆ ಪಂದ್ಯವನ್ನು ಕೈಚೆಲ್ಲಿದರು. ಆಸ್ಟ್ರೇಲಿಯಾ ಓಪನ್ ಟೂರ್ನಿ ಸಮೀಪದಲ್ಲಿದ್ದು ನಡಾಲ್ ಪ್ರತಿಷ್ಠಿತ ಟೂರ್ನಿಗೆ ಸಜ್ಜಾಗಬೇಕಿದೆ.
ಕಳೆದ ವರ್ಷದ ಮಧ್ಯಭಾಗದಲ್ಲಿ ನಡಾಲ್ ಗಾಯದ ಸಮಸ್ಯೆ ಎದುರಿಸಿದ್ದರು. ವಿಂಬಲ್ಡನ್ ಟೂರ್ನಿಯಲ್ಲಿ ಸಾಕಷ್ಟು ಬಳಲಿದ್ದ ಅವರು ಸೆಮಿಫೈನಲ್ ಪ್ರವೇಶಿಸಿದಾಗ ಟೂರ್ನಿಯಿಂದ ಹೊರ ನಡೆದಿದ್ದರು.
2023ರಲ್ಲಿ ನಿಧಾನಗತಿಯ ಆರಂಭದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಡಿ ಮಿನೌರ್ ವಿರುದ್ಧ ಸೋತಿದ್ದರೂ ಅವರಿಂದ ಸಕಾರಾತ್ಮಕ ಅಂಶವನ್ನು ಪಡೆಯುತ್ತೇನೆ. ಅವರಂಥ ಆಟಗಾರರ ಜೊತೆ ಆಡಲು ಇಷ್ಟಪಡುತ್ತೇನೆ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.
ಆಸ್ಟ್ರೇಲಿಯಾ ಓಪನ್ ಟೂರ್ನಿಯ ಹಾಲಿ ಚಾಂಪಿಯನ್ ಆಗಿರುವ ನಡಾಲ್ ತಮ್ಮ ವೇಗವನ್ನು ಸುಧಾರಿಸಿಕೊಳ್ಳಬೇಕಿದೆ. ಅಂಗಳದಲ್ಲಿ ಆಕ್ರಮಣಕಾರಿ ಆಟ ಆಡುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕಿದೆ. ಸೋಲಿನ ಆರಂಭ ಬಗ್ಗೆ ನಕಾರಾತ್ಮಕವಾಗಿ ಯೋಚಿಸುವುದಿಲ್ಲ ಎಂದಿದ್ದಾರೆ.
Rafael Nadal talks about failure in match