ನವದೆಹಲಿ : ಕೊರೊನಾ ವೈರಸ್ ಹರಡುವಿಕೆಯಿಂದಾಗಿ ಆರ್ಥಿಕತೆ ಮೇಲೆ ಉಂಟಾಗಿರೋ ಪರಿಣಾಮ, ಅದನ್ನು ನಿರ್ವಹಿಸುವ ಮಾರ್ಗಗಳ ಕುರಿತು ಹಾಗೂ ಪರಿಹಾರ ಕ್ರಮಗಳನ್ನ ಮತ್ತಷ್ಟು ಉತ್ತಮವಾಗಿ ಪ್ಲಾನ್ ಮಾಡುವ ಬಗ್ಗೆ ಸಂಸದ ರಾಹುಲ್ ಗಾಂಧಿ ಇಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು.
ಈ ವೇಳೆ ಅಭಿಜಿತ್ ಬ್ಯಾನರ್ಜಿ, ಭಾರತಕ್ಕೆ ದೊಡ್ಡ ಮೊತ್ತದ ನೆರವಿನ ಪ್ಯಾಕೇಜ್ ಅವಶ್ಯಕತೆ ಇದೆ. ಸದ್ಯಕ್ಕೆ ನಾವು ದೊಡ್ಡ ಪ್ಯಾಕೇಜ್ ಮೀಸಲಿಟ್ಟಿಲ್ಲ. ದೇಶದಲ್ಲಿ ಯಾರಿಗೆಲ್ಲಾ ಆಗತ್ಯವಿದೆಯೋ ಅವರಿಗೆ ರೇಷನ್ ಕಾರ್ಡ್ ಗಳನ್ನ ನೀಡಬೇಕು.
ಸದ್ಯ ಎರಡು ಪ್ರಮುಖ ವಿಚಾರಗಳಿವೆ. ಒಂದು ದಿವಾಳಿತನದ ಸರಪಳಿ ತಡೆಯೋದು. ಇದಕ್ಕೆ ಬಹುಶಃ ಸಾಲಗಳನ್ನ ಮನ್ನಾ ಮಾಡಬಹುದು. ಎರಡನೆಯದ್ದು, ಬೇಡಿಕೆ ಕುಸಿತ. ಆರ್ಥಿಕತೆಗೆ ಪುನಶ್ಚೇತನ ನೀಡಬೇಕಾದ್ರೆ ಜನರ ಕೈಯಲ್ಲಿ ನಗದು ಹಣ ತಲುಪುವಂತೆ ಮಾಡಬೇಕು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಇನ್ನು ಇತ್ತೀಚೆಗಷ್ಟೇ ರಾಹುಲ್ ಗಾಂಧಿ, ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರೊಂದಿಗೆ ಇದೇ ವಿಷಯದ ಕುರಿತಾಗಿ ಚರ್ಚೆ ನಡೆಸಿದ್ದರು.