ನಮಗಾಗಿ, ನಿನಗಾಗಿ ಸಿನಿಮಾ ಸಕ್ಸಸ್ ನ ಬಳಿಕ ಸೆಟ್ಟೇರಿದ್ದ ನಿರ್ದೇಶಕ ರಘುರಾಮ್ ಅವರ ಕನಸಿನ ಚಿತ್ರ. ಆರು ವರ್ಷಗಳಿಂದೆ ಶುರುವಾದ ಈ ಸಿನಿಮಾ ಕೆಲ ಕಾರಣಗಳಿಂದ ನಿಂತು ಹೋಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾಲೇ ನಮಗಾಗಿ ಸಿನಿಮಾದ ಹಾಡೊಂದನ್ನ ನಿರ್ದೇಶಕ ರಘುರಾಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ಇವತ್ತಿಗೆ 6 ವರ್ಷಗಳಾಯ್ತು ನನ್ನ ಕನಸು ಪ್ರಾರಂಭವಾಗಿ..ನಾವು ಅಂದುಕೊಳ್ಳೋದೇ ಒಂದು, ದೇವರು ನಡೆಸೋದು ಇನ್ನೊಂದು..ನಮಗಾಗಿ ಅನ್ನೋ ನನ್ನ ಕನಸು ನಿಮಗೆ ತೋರಿಸೊಕ್ಕೆ ಆಗಲ್ಲ ಕ್ಷಮೆಯಿರಲಿ..ಆದರೆ ಆ ಚಿತ್ರದ ಒಂದು ಚಿಕ್ಕ ಹಾಡಿನ ತುಣುಕು ನಿಮಗಾಗಿ” ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ ರಘುನಾಥ್.
ಈ ಸಿನಿಮಾ ನಿಂತ ಮೇಲೆ ರಘುರಾಮ್ ಮತ್ತೆ ನಮಗಾಗಿ ಶುರು ಮಾಡಲು ಬಹಳ ಪಯತ್ನಪಟ್ಟಿದ್ದಾರೆ. 18ಕ್ಕೂ ಹೆಚ್ಚು ನಿರ್ಮಾಪಕರಿಗೆ ಕಥೆ ಹೇಳಿದ್ದಾರೆ. ಎಲ್ಲರೂ ಕಥೆ ಚೆನ್ನಾಗಿದೆ ಎನ್ನುತ್ತಾರೆ ಆದರೆ ಸಿನಿಮಾ ಮಾಡಲು ಯಾರೂ ಮುಂದೆ ಬರುತ್ತಿಲ್ಲ ಎಂದು ರಘುರಾಮ್ ಹೇಳುತ್ತಿದ್ದಾರೆ.
‘ನಮಗಾಗಿ’ ರಾಧಿಕಾ ಕುಮಾರಸ್ವಾಮಿ ಮತ್ತು ವಿಜಯ್ ರಾಘವೇಂದ್ರ ಅಭಿನಯದ ಸಿನಿಮಾ. ನಿನಗಾಗಿ ಸಿನಿಮಾ ಸಕ್ಸಸ್ ನ ಬಳಿಕ ಈ ಜೋಡಿಯನ್ನು ನಮಗಾಗಿ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ ಈ ಸಿನಿಮಾ ಚಿತ್ರೀಕರಣ ಹಂತದಲ್ಲೇ ನಿಂತು ಹೋಗಿದೆ.








