ಚೆನ್ನೈ: ದೇಶದಲ್ಲಿ ಚುನಾವಣಾ ಕಾವು ರಂಗೇರಿದೆ. ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡಿವೆ. ಪ್ರಚಾರದ ಮಧ್ಯೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳುನಾಡಿನ ಸಿಂಗಾನಲ್ಲೂರಿನಲ್ಲಿ ಬೇಕರಿಯೊಂದಕ್ಕೆ ಭೇಟಿ ನೀಡಿ ಗುಲಾಬ್ ಜಾಮೂನ್ ಖರೀದಿಸಿದ್ದಾರೆ.
ರಾಹುಲ್ ಗಾಂಧಿ ಕೊಯಮತ್ತೂರಿನ ಸಭೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬೇಕರಿಯೊಂದರ ಬಳಿ ಕಾರು ನಿಲ್ಲಿಸಿ ಜಾಮೂನು ಖರೀದಿಸಿದ್ದಾರೆ. ಒಂದು ಕಿಲೋ ಸ್ವೀಟ್‍ನ್ನು ಅವರು ಖರೀದಿಸಿದ್ದಾರೆ. ನಾವು ರಾಹುಲ್ ಗೆ ಹಣ ಪಾವತಿಸಬಾರದೆಂದು ಕೇಳಿಕೊಂಡೆವು. ಆದರೂ ಅವರು ಹಣ ಪಾವತಿಸಿದ್ದಾರೆ ಎಂದು ಅಂಗಡಿ ಮಾಲೀಕ ಬಾಬು ಹೇಳಿದ್ದಾರೆ.
ಇದಕ್ಕೂ ಮುನ್ನ ಸಭೆಯೊಂದರಲ್ಲಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದ ಚುನಾವಣಾ ಬಾಂಡ್ ಯೋಜನೆ ಜಗತ್ತಿನಲ್ಲಿ ಯಾರೂ ಮಾಡಿರದ ದೊಡ್ಡ ಭ್ರಷ್ಟಾಚಾರ. ಸಿಬಿಐ, ಇಡಿ ಅಥವಾ ಆದಾಯ ತೆರಿಗೆ ಇಲಾಖೆಯಿಂದ ಕಂಪನಿಗಳನ್ನು ಹೆದರಿಸಿ ಬಿಜೆಪಿ ಹಣ ಪಡೆದು ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.