ಸ್ಪಿನ್ ಗೆ ಹೇಗೆ ಆಡಬೇಕು…? ಪೀಟರ್ಸನ್ ಗೆ ಅಕ್ಷರ ರೂಪದಲ್ಲಿ ಪಾಠ ಹೇಳಿಕೊಟ್ಟಿದ್ದ ದ್ರಾವಿಡ್..!

ಸ್ಪಿನ್ ಗೆ ಹೇಗೆ ಆಡಬೇಕು…? ಪೀಟರ್ಸನ್ ಗೆ ಅಕ್ಷರ ರೂಪದಲ್ಲಿ ಪಾಠ ಹೇಳಿಕೊಟ್ಟಿದ್ದ ದ್ರಾವಿಡ್..!

ರಾಹುಲ್ ದ್ರಾವಿಡ್.. ಟೀಮ್ ಇಂಡಿಯಾದ ಮಾಜಿ ನಾಯಕ.. ದಿ ಗ್ರೇಟ್ ವಾಲ್… ಜಂಟಲ್ ಮೆನ್ ಕ್ರಿಕೆಟಿಗ. ಕ್ರಿಕೆಟ್ ಜಗತ್ತಿನ ಬುದ್ಧ…ಹೀಗೆ ಅನೇಕ ಬಿರುದುಗಳು ರಾಹುಲ್ ದ್ರಾವಿಡ್ ಹೆಸರಿನಲ್ಲಿ ಅಂಟಿಕೊಂಡಿವೆ.
ಹೌದು, ರಾಹುಲ್ ದ್ರಾವಿಡ್ ಸ್ಟೈಲೀಶ್ ಬ್ಯಾಟ್ಸ್ ಮೆನ್. ಅದು 150 ಕೀಲೋ ಮೀಟರ್ ವೇಗದ ಎಸೆತವೇ ಆಗಿರಲಿ.. ಅದನ್ನು ಕ್ಷಣ ಮಾತ್ರದಲ್ಲಿ ತನ್ನ ಬ್ಯಾಟ್‍ನಿಂದ ನಿಲ್ಲಿಸುವಂತಹ ತಾಕತ್ತೂ ಇದೆ… ಅದೇ ರೀತಿ ಬುಗರಿಯಂತೆ ತಿರುಗಿಕೊಂಡು ಬರುವ ಮಾಂತ್ರಿಕ ಎಸೆತವೇ ಆಗಿರಲಿ.. ಅದಕ್ಕೆ ತಕ್ಕ ಉತ್ತರ ನೀಡುವ ಜಾಣ್ಮೆಯೂ ದ್ರಾವಿಡ್ ಅವರ ಬತ್ತಳಿಕೆಯಲ್ಲಿದೆ.

ಹಾಗೇ ಚೆಂಡನ್ನು ಸರಸರನೇ ನೆಲದ ಮೇಲೆಯೇ ಬೌಂಡರಿಗಟ್ಟಿಸುವ ಕಲೆಯೂ ಗೊತ್ತಿದೆ. ಆಗಸದೆತ್ತರದಲ್ಲಿ ಸೀಮಾರೇಖೆಯನ್ನು ದಾಟಿಸುವ ಸಾಮಥ್ರ್ಯವೂ ದ್ರಾವಿಡ್ ಅವರ ಬ್ಯಾಟಿಂಗ್‍ನಲ್ಲಿದೆ. ಅದಕ್ಕಾಗಿಯೇ ದ್ರಾವಿಡ್‍ಗೆ ವಿಶ್ವ ಕ್ರಿಕೆಟ್ ನಲ್ಲಿ ತನ್ನದೇ ಆದ ಹೆಸರು, ಕೀರ್ತಿ ಎಲ್ಲವೂ ಇದೆ.

ಅಂದ ಹಾಗೇ ದ್ರಾವಿಡ್ ಅವರ ದೊಡ್ಡತನವನ್ನು ಇಂಗ್ಲೆಂಡ್‍ನ ಮಾಜಿ ನಾಯಕ ಕೇವಿನ್ ಪೀಟರ್ಸನ್ ನೆನಪು ಮಾಡಿಕೊಂಡಿದ್ದಾರೆ. ದ್ರಾವಿಡ್ ಮಾಡಿರುವ ಸಹಾಯವನ್ನು ತನ್ನ ಪುಸ್ತಕದಲ್ಲಿ ಸಹ ಬರೆದುಕೊಂಡಿದ್ದಾರೆ ಪೀಟರ್ಸನ್.
2008ರ ಐಪಿಎಲ್ ನಂತರ ದ್ರಾವಿಡ್ ಮತ್ತು ಕೇವಿನ್ ಪಿಟರ್ಸನ್ ತುಂಬಾ ಆಪ್ತರಾಗಿದ್ದರು. ಇಬ್ಬರು ಕೂಡ ರಾಯಲ್ ಚಾಲೆಂಜರ್ಸ್ ತಂಡದ ಪರ ಆಡುತ್ತಿದ್ದರು.

ಹೀಗಾಗಿ ಇಬ್ಬರಲ್ಲೂ ಆಪ್ತ ಸ್ನೇಹವಿತ್ತು. ಅದು ಮುಂದೊಂದು ದಿನ ಈ ರೀತಿ ನೆರವಾಗುತ್ತೆ ಅಂತ ಪೀಟರ್ಸನ್ ಅಂದುಕೊಂಡಿರಲಿಲ್ಲ. ಕೇವಿನ್ ಪೀಟರ್ಸನ್ ಈ ರೀತಿಯ ಸಹಾಯ ಕೇಳುತ್ತಾರೆ ಅಂತ ದ್ರಾವಿಡ್ ಕೂಡ ಅಂದುಕೊಂಡಿರಲಿಲ್ಲ.
ಆಗಿದ್ದು ಇಷ್ಟೇ.. ಅದು 2010. ಇಂಗ್ಲೆಂಡ್ ಮತ್ತು ಬಾಂಗ್ಲಾ ದೇಶದ ನಡುವೆ ಟೆಸ್ಟ್ ಸರಣಿ ನಡೆದಿತ್ತು. ಟೆಸ್ಟ್ ಸರಣಿಗೆ ಮುಂಚಿತವಾಗಿ ಅಭ್ಯಾಸ ಪಂದ್ಯವನ್ನಾಡಿದ್ದರು. ಆ ಅಭ್ಯಾಸ ಪಂದ್ಯದಲ್ಲಿ ಕೇವಿನ್ ಪೀಟರ್ಸನ್ ಅವರನ್ನು ಬಾಂಗ್ಲಾದ ಇಬ್ಬರು ಸ್ಪಿನ್ನರ್‍ಗಳು ಕಾಡಿದ್ದರು.

ಎರಡೂ ಇನಿಂಗ್ಸ್ ನಲ್ಲೂ ಪೀಟರ್ಸನ್ ಸ್ಪಿನ್ನರ್‍ಗಳಿಗೆ ಔಟಾಗಿದ್ದರು. ಶಕೀಬ್ ಉಲ್ ಹಸನ್ ಮತ್ತು ಅಬ್ದುರ್ ರಝಾಕ್ ಅವರ ಎಸೆತಗಳಿಗೆ ಪೀಟರ್ಸನ್ ಸ್ತಬ್ದಗೊಂಡಿದ್ದರು. ಕೇವಿನ್ ಪೀಟರ್ಸನ್ ಅದ್ಭುತ ಬ್ಯಾಟ್ಸ್ ಮೆನ್. ಆದ್ರೆ ಸ್ಪಿನ್ನರ್‍ಗಳ ಎದುರು ಪರದಾಡುತ್ತಾರೆ ಎಂಬ ಮಾತುಗಳಿದ್ದವು. ಹೀಗಾಗಿ ಕೇವಿನ್ ಪೀಟರ್ಸನ್ ತಲೆಕೆಡಿಸಿಕೊಂಡು ಕುಳಿತಿದ್ದಾಗ ಅವರಿಗೆ ನೆನಪಾಗಿರೋದು ಭಾರತದ ಬ್ಯಾಟಿಂಗ್ ಡಾಕ್ಟರ್ ರಾಹುಲ್ ದ್ರಾವಿಡ್.

ಹೀಗೆ ಸ್ಪಿನ್ನರ್‍ಗಳ ಎದುರು ಹೇಗೆ ಆಡಬೇಕು ಎಂಬ ಸಲಹೆಯನ್ನು ಪಡೆಯಲು ದ್ರಾವಿಡ್‍ಗೆ ಪೀಟರ್ಸನ್ ಮನವಿ ಮಾಡಿಕೊಂಡಿದ್ದರು. ಆಗ ರಾಹುಲ್ ದ್ರಾವಿಡ್ ಕೆಪಿಯ ನೆರೆವಿಗೆ ಮುಂದಾದ್ರು. ಅಲ್ಲದೆ ಎರಡು ಪುಟಗಳಷ್ಟು ಅಕ್ಷರದಲ್ಲೇ ಸ್ಪಿನ್ ಎಸೆತಗಳಿಗೆ ಆಡುವ ಕಲೆಯನ್ನು ಕೆವಿನ್ ಪೀಟರ್ಸನ್‍ಗೆ ಮನದಟ್ಟು ಆಗುವಂತೆ ಇ ಮೇಲ್ ಕಳುಹಿಸಿದ್ದರು.
ದ್ರಾವಿಡ್ ನನಗೆ ಸುಂದರವಾದ ಇ ಮೇಲ್ ಅನ್ನು ಕಳುಹಿಸಿದ್ದರು. ಅದರಲ್ಲಿ ಸ್ಪಿನ್‍ಗೆ ಹೇಗೆ ಆಡಬೇಕು. ಸ್ಪಿನ್ ಆಡುವ ಕಲೆಯನ್ನು ಅರ್ಥವಾಗುವಂತೆ ವಿವರಿಸಿದ್ದರು. ಅಂದಿನಿಂದ ನನ್ನ ಆಟದಲ್ಲಿ ಬದಲಾವಣೆಯಾಯ್ತು. ಸ್ಪಿನ್‍ಗೆ ಯಾವ ರೀತಿ ಆಡಬೇಕು ಎಂಬುದನ್ನು ದ್ರಾವಿಡ್ ನನಗೆ ಹೇಳಿಕೊಟ್ಟಿದ್ದರು ಎಂದು ಕೆವಿನ್ ಪೀಟರ್ಸನ್ ಹೇಳಿಕೊಂಡಿದ್ದಾರೆ.

ಕೆವಿನ್ ಪೀಟರ್ಸನ್ ಗೆ ದ್ರಾವಿಡ್ ಸಲಹೆ
ನೀವು, ಮಾಂಟಿ ಮತ್ತು ಸ್ವಾನ್ ಎಸೆತಗಳಿಗೆ ಅಭ್ಯಾಸ ಮಾಡಿ. ಆದ್ರೆ ಕಾಲಿಗೆ ಪ್ಯಾಡ್ ಕಟ್ಟಿಕೊಳ್ಳಬೇಡಿ. ಈ ರೀತಿ ಅಭ್ಯಾಸ ಮಾಡುವಾಗ ಸ್ವಲ್ಪ ನೋವು ಆಗಬಹುದು. ಆದ್ರೆ ಹೇಗೆ ಆಡಬೇಕು ಎಂಬುದು ಗೊತ್ತಾಗುತ್ತದೆ. ಅದು ಅಲ್ಲದೆ ಸ್ಪಿನ್ ಎಸೆತಗಳಿಗೆ ಎಂದಿಗೂ ಪ್ಯಾಡ್‍ಗಳ ಅಗತ್ಯವಿಲ್ಲ ಎಂದು ನನ್ನ ಕೋಚ್ ನನಗೆ ಹೇಳುತ್ತಿದ್ದರು. ಮೊದಲು ಚೆಂಡು ಯಾವ ರೀತಿ ಬರುತ್ತೆ ಎಂಬುದನ್ನು ನೋಡಿಕೊಳ್ಳಿ.. ಆಮೇಲೆ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಿ. ನಿಮಗೆ ನಿಮ್ಮ ಮೇಲೆ ನಂಬಿಕೆ ಇರಬೇಕು. ನಿಮಗೆ ಸ್ಪಿನ್ ಗೆ ಆಡಲು ಆಗಲ್ಲ ಅಂತ ಅಂದುಕೊಳ್ಳಬೇಡಿ. ಯಾರಿಗೂ ಹೇಳ ಬೇಡಿ. ನಾನು ನಿಮ್ಮನ್ನು ನೋಡಿದ್ದೇನೆ. ನಿಮ್ಮಿಂದ ಅದು ಸಾಧ್ಯ ಎಂದು ದ್ರಾವಿಡ್ ಇ ಮೇಲ್‍ನಲ್ಲಿ ಕೆವಿನ್ ಪೀಟರ್ಸನ್‍ಗೆ ಸಲಹೆ ನೀಡಿದ್ದರು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This