ಭಾರತ್ ಜೋಡೋ ಯಾತ್ರೆ ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ…
ಕನ್ಯಾಕುಮಾರಿಯಿಂದ ಕಾಶ್ಮೀರ ವರೆಗಿನ 3570 ಕಿಮೀ ದೂರದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ತಮಿಳುನಾಡು ಮತ್ತು ಕೇರಳದ ನಂತರ ಕರ್ನಾಟವನ್ನ ಪ್ರವೇಶಿಸಿದೆ.
ಈ ಯಾತ್ರೆಯನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ, ಏನೇ ನಡೆದರೂ ಯಾತ್ರೆ ನಿಲ್ಲುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಚಾಮರಾಜಪೇಟೆ ಜಿಲ್ಲೆ ಮೂಲಕ ಕರ್ನಾಟಕ ಪ್ರವೇಶಿಸಿ ಮಾತನಾಡಿದ ರಾಹುಲ್ ಗಾಂಧಿ “ಭಾರತ ಜೋಡೋ ಯಾತ್ರೆಯ ಮಾರ್ಗದರ್ಶಕ ಜ್ಯೋತಿಯಾಗಿರುವ ಮಹಾ ಗುರು ಬಸವಣ್ಣನವರ ನಾಡು ಕರ್ನಾಟಕಕ್ಕೆ ನಮಸ್ಕಾರಗಳು. ನಾವು ನಿಮ್ಮ ಮಾತನ್ನು ಕೇಳಲು ಬಂದಿದ್ದೇವೆ. ಈ ಯಾತ್ರೆಯು ಜನತೆಯ ಧ್ವನಿಯಾಗಿದೆ ಎಂದು ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪ್ರವೇಶಿಸಿರುವ ಯಾತ್ರೆ ಮಂಡ್ಯ, ಮೈಸೂರು, ಚಿತ್ರದುರ್ಗ ಮತ್ತು ಬಳ್ಳಾರಿಯಲ್ಲಿ ರ್ಯಾಲಿಗಳನ್ನು ಆಯೋಜಿಸಲಾಗಿದೆ. ರಾಜ್ಯದ ರಾಯಚೂರು ಜಿಲ್ಲೆಯ ಮೂಲಕ ನೆರೆಯ ಆಂಧ್ರಪ್ರದೇಶವನ್ನು ಯಾತ್ರೆ ಪ್ರವೇಶಿಸಲಿದೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್, ಯಾತ್ರೆಯನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಲು ವಿಶೇಷ ಪ್ರಯತ್ನ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷದ ಕಾರ್ಯಕರ್ತರು ಹಾಗೂ ಜನ ಸಾಮಾನ್ಯರನ್ನು ಒಟ್ಟುಗೂಡಿಸುವ ನಿರ್ದಿಷ್ಟ ಜವಾಬ್ದಾರಿಯನ್ನು ನಾಯಕರಿಗೆ ವಹಿಸಿ ರಾಹುಲ್ ಗಾಂಧಿಯವರೊಂದಿಗೆ ನಡೆಯುವಂತೆ ಮಾಡಿದ್ದರು.
Rahul Gandhi: Bharat Jodo Yatra enthuses Cong workers, but will it translate into votes?