ಕೇಂದ್ರದ ‘ಮೇಡ್ ಇನ್ ಇಂಡಿಯಾ’ ಘೋಷಣೆ ಬಗ್ಗೆ ಟೀಕೆ ಮಾಡಿದ ರಾಹುಲ್ ಗಾಂಧಿ
‘ಮೇಡ್ ಇನ್ ಇಂಡಿಯಾ’ ಘೋಷಣೆ ಬಗ್ಗೆ ಕೇಂದ್ರ ಸರ್ಕಾರವನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಚೀನಾದ ಜೊತೆಗಿನ ವಾಣಿಜ್ಯ ಚಟುವಟಿಕೆ ಪ್ರಮಾಣ ಕುಗ್ಗುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶ್ರೀಂಗ್ಲಾ ಆತಂಕ ವ್ಯಕ್ತಪಡಿಸಿದ್ದರು.
ಆದರೆ ಚೀನಾದ ಜೊತೆಗಿನ ಭಾರತದ ವಾಣಿಜ್ಯ ವಹಿವಾಟು ಮೊದಲ 9 ತಿಂಗಳಲ್ಲಿ ಶೇ 49ರಷ್ಟು ಏರಿತ್ತು. ಇದು ಕೇಂದ್ರ ಸರ್ಕಾರದ ಇಬ್ಬಗೆಯ ಮಾತು ಎಂದು ರಾಹುಲ್ ಟೀಕಿಸಿದ್ದಾರೆ. ಅಲ್ಲದೇ ಚೀನಾ ಜೊತೆಗಿನ ವಾಣಿಜ್ಯ ವಹಿವಾಟು ಶೇ 49ರಷ್ಟು ಏರಿಕೆಯಾಗಿದೆ ಎಂಬುದಕ್ಕೆ ಪೂರಕವಾದ ಮಾಧ್ಯಮ ವರದಿಯನ್ನು ಟ್ವೀಟ್ ಜೊತೆಗೆ ಹಂಚಿಕೊಂಡಿದ್ದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..