Election 2022 : ಸೋಲನ್ನ ನಮ್ರತೆಯಿಂದ ಸ್ವೀಕರಿಸುತ್ತೇವೆ , ಕಲಿಯುತ್ತೇವೆ : ರಾಹುಲ್ ಗಾಂಧಿ
ನವದೆಹಲಿ : ಇಂದು ಪಂಚರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು , ಐದೂ ರಾಜ್ಯಗಳಲ್ಲಿ ಕಾಂಗ್ರೆಸ್ ಅತ್ಯಂತ ಹೀನಾಯವಾಗಿ ಸೋತಿದೆ.. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಂಜಾಬ್ ನಲ್ಲಿ ಆದ್ಮಿ ಪಾರ್ಟಿ ಭರ್ಜರಿ ಜಯ ದಾಖಲಿಸಿದೆ.. ಇನ್ನೂ ಈ ಸೋಲಿನ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರತಿಕ್ರಿಯೆ ನೀಡಿದ್ದು ಜನರ ತೀರ್ಪನ್ನು ನಾವು ನಮ್ರತೆಯಿಂದ ಸ್ವೀಕರಿಸುತ್ತೇವೆ ಎಂದಿದ್ದಾರೆ.
ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು ಜನರ ತೀರ್ಪನ್ನು ನಾವು ನಮ್ರತೆಯಿಂದ ಸ್ವೀಕರಿಸುತ್ತಿದ್ದೇನೆ. ಜನ ಮತ್ತು ದೇಶವನ್ನು ಗೆದ್ದವರಿಗೆ ಶುಭಾಶಯಗಳು ಎಂದು ಹಾರೈಸಿದ್ದಾರೆ. ನಮ್ಮ ಪಕ್ಷಕ್ಕಾಗಿ ದುಡಿದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ವಯಂಸೇವಕರಿಗೆ ಅವರ ಶ್ರಮ ಮತ್ತು ಸಮರ್ಪಣೆಗಾಗಿ ನನ್ನ ಕೃತಜ್ಞತೆಗಳು.
ನಾವು ಈ ಸೋಲಿನಿಂದ ಕಲಿಯುತ್ತೇವೆ. ನಾವು ಭಾರತದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಬರೆದುಕೊಂಡಿದ್ದಾರೆ. ಪಂಜಾಬ್ ನಲ್ಲಿ ಎಎಪಿ ಮತ್ತು ಉಳಿದ ನಾಲ್ಕು ರಾಜ್ಯದಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದೆ.








