ಮೋದಿ ಆಡಳಿತವನ್ನ ದುರಾಡಳಿತ ಎಂದು ಬಣ್ಣಿಸಿದ ರಾಹುಲ್ ಗಾಂಧಿ…
ದೇಶದಲ್ಲಿ ಹಣದುಬ್ಬರ ಏರಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಆಡಳಿತವನ್ನು ದುರಾಡಳಿತ ಎಂದು ಬಣ್ಣಿಸಿದ್ದಾರೆ.
‘ವಿದ್ಯುತ್ ಬಿಕ್ಕಟ್ಟು, ಉದ್ಯೋಗ ಬಿಕ್ಕಟ್ಟು, ರೈತರ ಬಿಕ್ಕಟ್ಟು, ಹಣದುಬ್ಬರ ಬಿಕ್ಕಟ್ಟು’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೇಗೆ ಹಾಳುಮಾಡಬಹುದು ಎಂಬುದಕ್ಕೆ ಪ್ರಧಾನಿ ಮೋದಿಯವರ ಎಂಟು ವರ್ಷಗಳ ದುರಾಡಳಿತ ಉದಾಹರಣೆಯಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.
ಈ ಹಿಂದೆ ಏಪ್ರಿಲ್ 30 ರಂದು ರಾಹುಲ್ ದೇಶದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬಿಕ್ಕಟ್ಟಿನ ಬಗ್ಗೆ ಪ್ರಶ್ನೆ ಎತ್ತಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಪ್ರಧಾನಿಯವರ ‘ಭರವಸೆಗಳು’ ಮತ್ತು ‘ಉದ್ದೇಶ’ಗಳ ನಡುವಿನ ತಂತಿಯು ಯಾವಾಗಲೂ ಕತ್ತರಿಸಲ್ಪಡುತ್ತದೆ. ಮೋದಿ ಜೀ, ಈ ವಿದ್ಯುತ್ ಬಿಕ್ಕಟ್ಟಿನಲ್ಲಿ ನಿಮ್ಮ ವೈಫಲ್ಯಕ್ಕೆ ಯಾರನ್ನು ದೂಷಿಸುವಿರಿ? ನೆಹರೂಗೆ? ರಾಜ್ಯ ಸರ್ಕಾರಗಳಿಗೆ? ಅಥವಾ ಸಾರ್ವಜನಿಕರಿಗೆ ಮಾತ್ರವೇ?
ಇಂಧನ ಬೆಲೆ ಏರಿಕೆಗೆ ಕೇಂದ್ರವು ರಾಜ್ಯವನ್ನು ದೂಷಿಸುತ್ತದೆ ಎಂದು ರಾಹುಲ್ ಹೇಳಿದರು
‘ಹೆಚ್ಚಾದ ಇಂಧನ ಬೆಲೆ – ರಾಜ್ಯದ ತಪ್ಪು, ಕಲ್ಲಿದ್ದಲು ಕೊರತೆ – ರಾಜ್ಯದ ತಪ್ಪು, ಆಮ್ಲಜನಕದ ಕೊರತೆ – ರಾಜ್ಯದ ತಪ್ಪು. ಎಲ್ಲಾ ಇಂಧನ ತೆರಿಗೆಗಳಲ್ಲಿ 68% ಕೇಂದ್ರದಿಂದ ಸಂಗ್ರಹಿಸಲಾಗುತ್ತದೆ. ಆದರೂ ಪ್ರಧಾನಿ ಜವಾಬ್ದಾರಿಯಿಂದ ನುಣುಚಿಕೊಂಡರು ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದಲ್ಲಿ ದ್ವೇಷ ಹರಡುತ್ತಿದೆ
ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶದಲ್ಲಿ ದ್ವೇಷವನ್ನು ಹರಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ. ಎಪ್ರಿಲ್ 9 ರಂದು ದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಸಂವಿಧಾನವನ್ನು ಉಳಿಸಲು, ನಾವು ಆರ್‌ಎಸ್‌ಎಸ್ ಕೈಯಲ್ಲಿರುವ ಸಂಸ್ಥೆಗಳನ್ನು ರಕ್ಷಿಸಬೇಕು ಎಂದು ಹೇಳಿದರು.








