Rahul Gandhi : ಪ್ರಧಾನಿ ಮೋದಿ ಅವರ ಬಗ್ಗೆ 5 ಸತ್ಯಗಳು ಎಂದು ಟ್ವೀಟ್ ಮಾಡಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರ ಬಗ್ಗೆ 5 ಸತ್ಯಗಳನ್ನ ಹೇಳಿದ್ದಾರೆ..
ಚೀನಾದ ಅತಿಕ್ರಮಣ ಮತ್ತು ಅದರ ಬಗೆಗಿನ ಪ್ರಧಾನಿಯವರ ಮೌನವು ದೇಶಕ್ಕೆ ಅತ್ಯಂತ ಹಾನಿಕಾರಕ ಎಂದು ಕಿಡಿಕಾಡಿರುವ ರಾಗಾ ,
ಮೊದಲನೇಯದ್ದಾಗಿ ಮೋದಿ ಅವರು ಚೀನಾಕ್ಕೆ ಹೆದರಿದ್ದಾರೆ ಮತ್ತು ತಮ್ಮ ಇಮೇಜ್ ರಕ್ಷಿಸಿಕೊಳ್ಳುವುದಕ್ಕಾಗಿ ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದರು.
ಎರಡನೇಯದ್ದಾಗಿ ಸಾರ್ವಜನಿಕರಿಂದ ಸತ್ಯವನ್ನು ಮರೆಮಾಚುತ್ತಾರೆ. ಮೂರನೇಯದ್ದು ಕೇವಲ ತಮ್ಮ ಇಮೇಜ್ ರಕ್ಷಿಸಿಕೊಳ್ಳುತ್ತಾರೆ.
ನಾಲ್ಕನೇಯದ್ದು ಸೇನೆಯ ನೈತಿಕತೆಯನ್ನು ಕುಗ್ಗಿಸುತ್ತಿದ್ದಾರೆ. ಐದನೇಯದ್ದು ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ..