ನವದೆಹಲಿ: ರಾಹುಲ್ ಗಾಂಧಿ ನಾಯಿ ತಿನ್ನದ ಬಿಸ್ಕತ್ ನ್ನು ಕಾರ್ಯಕರ್ತನಿಗೆ ನೀಡಿದ್ದು, ವಿಡಿಯೋ ವೈರಲ್ ಆಗಿದೆ. ರಾಹುಲ್ ಗಾಂಧಿಯ ಈ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಭಾರತ ಜೋಡೋ ನ್ಯಾಯ ಯಾತ್ರೆ (Bharth Jodo Nyay yatra) ವೇಳೆ ರಾಹುಲ್ ಗಾಂಧಿ ನಾಯಿಗೆ (Dog) ಬಿಸ್ಕತ್ (Biscuit ) ನೀಡಿದ್ದಾರೆ. ಅದನ್ನು ನಾಯಿ ತಿನ್ನಲು ನಿರಾಕರಿಸಿದೆ. ಆಗ ಅವರನ್ನು ಮಾತನಾಡಿಸಲು ಕಾರ್ಯಕರ್ತರೊಬ್ಬರು ಬಂದಿದ್ದಾರೆ. ಗ ನಾಯಿಗೆ ಹಾಕಿದ ಬಿಸ್ಕತ್ತಲ್ಲೇ ಒಂದು ಬಿಸ್ಕತ್ತನ್ನು ತೆಗೆದು ಕಾರ್ಯಕರ್ತನಿಗೆ ನೀಡಿದ್ದಾರೆ.
अभी कुछ दिन पहले कांग्रेस अध्यक्ष खड़गे जी ने पार्टी के बूथ एजेंटों की तुलना कुत्तों से की और यहाँ राहुल गांधी अपनी यात्रा में एक कुत्ते को बिस्किट खिला रहे हैं और जब कुत्ते ने नहीं खाया तो वही बिस्किट उन्होंने अपने कार्यकर्ता को दे दिया।
जिस पार्टी का अध्यक्ष और युवराज अपने… pic.twitter.com/70Mn2TEHrx
— Amit Malviya (@amitmalviya) February 5, 2024
ಬಿಜೆಪಿ ಐಟಿ ಸೆಲ್ನ ಅಮಿತ್ ಮಾಳವೀಯ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತ ಬೂತ್ ಏಜೆಂಟರನ್ನು ನಾಯಿಗಳಿಗೆ ಹೋಲಿಸಿದ್ದರು. ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರು ಕಾರ್ಯಕರ್ತನನ್ನು ನಾಯಿಯಂತೆ ನಡೆಸಿಕೊಂಡರೆ ಆ ಪಕ್ಷ ಹಾಳಾಗುವುದು ಪಕ್ಕಾ ಎಂದು ಹೇಳಿದ್ದಾರೆ.